ಬಂಟ್ವಾಳ: ಎಸ್.ಎಸ್.ಎಫ್. ಇರಾಮೂಲೆ ಶಾಖೆಯ ವತಿಯಿಂದ ಪ್ರತಿಷ್ಠಿತ 12 ತಂಡಗಳ ಮಧ್ಯೆ ಆವೇಶಭರಿತ ಮುಹ್ಯದ್ದೀನ್ ಮಾಲೆ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಎನ್.ಡಿ. ಅಬೂಬಕರ್ ಮದನಿ ಉದ್ಘಾಟಿಸಿದರು.


ಈ ಸ್ಪರ್ಧೆಯಲ್ಲಿ ಪೊಸೋಟ್ ಮಳ್ಹರ್ ಶರೀಅತ್ ವಿಭಾಗ ಪ್ರಥಮ ಸ್ಥಾನ ಪಡೆದರು. ಪೊಸೋಟ್ ಮಳ್ಹರ್ ದಅ್’ವಾ ವಿಭಾಗ ದ್ವಿತೀಯ ಸ್ಥಾನ ಪಡೆದಕೊಂಡು, ಕೊಡಗು ತಂಡ ತೃತೀಯ ಸ್ಥಾನ ಪಡೆದುಕೊಂಡರು.
ಅಬೂಬಕರ್ ಸಖಾಪಿ ಮೂಲೆ ಸ್ವಾಗತಿಸಿದರು. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಝಾಕ್ ಕುಕ್ಕಾಜೆ ಪ್ರಾಸ್ತಾವಿಕ ಭಾಷಣ ಹಾಗೂ ವಿಜೇತ ತಂಡಗಳಿಗೆ ಟ್ರೋಪಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಮೊಯ್ದಿನ್ ಕುಂಞ್ಞಿ ಮೂಲೆ, ಉಮರ್ ಪರಪ್ಪು, ಗೋಪಾಲ ಅಶ್ವತ್ಥಡಿ, ಮೊಹಲ್ಲಾದ ಸಹ ಅದ್ಯಾಪಕ ರಫೀಕ್ ಮಿಸ್ಬಾಹಿ, ಹಾಫಿಳ್ ಸುಲೈಮಾನ್ ಹನೀಫಿ ಪಾಣೆಮಂಗಳೂರು, ಹಮೀದ್ ಮದನಿ ಬೋಳಂತೂರು
ಮತ್ತಿತ್ತರು ಉಪಸ್ಥಿತರಿದ್ದರು.

