ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಿಚಾರಣೆ ನಡೆಸಿರುವ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮೂರು ವರ್ಷಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಆರೋಪಿಗಳಾದ ಉಳ್ಳಾಲ ಮೇಲಂಗಡಿ ನಿವಾಸಿ ಹಮೀದ್ ಅವರ ಪುತ್ರ ಮಹಮ್ಮದ್ ಅರ್ಫಾಜ್(19), ಪುದು ಮಾರಿಪಳ್ಳ ನಿವಾಸಿ ಅಬ್ದುಲ್ ಸಿದ್ದಿಕ್ ಪುತ್ರ ಶಾಕೀರ್(20), ಪುದು ರೊಟ್ಟಿಗುಡ್ಡೆ ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ನೌಫಲ್ ಟಿ.(24), ಪುದು ಮಾರಿಪಳ್ಳ ನಿವಾಸಿ ಅಬ್ದುಲ್ ಸಿದ್ದಿಕ್ ಪುತ್ರ ಶಮೀರ್ ಟಿ.(24) ಹಾಗೂ ಮಾರಿಪಳ್ಳ ನಿವಾಸಿ ಅಬ್ದುಲ್ ರಝಾಕ್ ಪುತ್ರ ಮಹಮ್ಮದ್ ನಿಸಾರ್(22) ವಿರುದ್ಧ ಬಂಟ್ವಾಳ ಪೊಲೀಸರು ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಎಂ.ಎಸ್. ಅವರು ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಅಂದಿನ ಬಂಟ್ವಾಳ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಎಂ.ಎಸ್.ಪ್ರಕಾಶ್ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಹೆಡ್ ಕಾನ್ಸ್ಟೇಬಲ್ ಸುರೇಶ್ ಕುಮಾರ್ ಮತ್ತು ಗಿರೀಶ್ ತನಿಖೆಗೆ ಸಹಕರಿಸಿದ್ದರು.

