ಬಂಟ್ವಾಳ : ಇಂದು ಕೃಷಿ ಕ್ಷೇತ್ರ ವಿಸ್ತಾರಗೊಂಡಿದ್ದು, ವಿಫುಲ ಅವಕಾಶಗಳಿವೆ. ಸ್ವತ: ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಲಾಭ ಗಳಿಸಿ ಸ್ವಾವಲಂಬನೆಯ ಬದುಕು ಸಾಧ್ಯ. ಕಾಲ ಕಾಲಕ್ಕೆ ಪರ್ಯಾಯ ಬೆಳೆಗಳನ್ನು ಬೆಳೆಸುವುವ ಮೂಲಕ ಕೃಷಿಕರು ಸಮಯದ ಸದ್ಬಳಕೆ ಮಾಡಬೇಕು. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಹೇಳಿದರು.
ಅವರು ಶನಿವಾರ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಬಂಟ್ವಾಳ ತಾಲೂಕು ವಾಮದಪದವು ಕಲ್ಪವೃಕ್ಷ ತೆಂಗು ಬೆಳೆಗಾರರ ಸೊಸೈಟಿಯನ್ನು ಮತ್ತು ಬಂಟ್ವಾಳ ಸಹಾಯಕ ತೋಟಗಾರಿಕಾ ಇಲಾಖೆ ವತಿಯಿಂದ ನಡೆದ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಾಮದಪದವು ಕಲ್ಪವೃಕ್ಷ ತೆಂಗು ಬೆಳೆಗಾರರ ಸೊಸೈಟಿ ಅಧ್ಯಕ್ಷ ವಿಜಯ ರೈ ಆಲದಪದವು ಅವರು ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನ ಜಿ.ಕೆ. ಭಟ್ ಅವರು ಮಾತನಾಡಿ, ತೆಂಗು ಬೆಳೆಗಾರರನ್ನು ಪ್ರೋತ್ಸಾಹಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಹೆಚ್ಚಿನ ನೆರವು ನೀಡುತ್ತಿದೆ. ತೆಂಗು ಬೆಳೆಗಾರರು ಇದನ್ನು ಸದ್ಬಳಕೆ ಮಾಡಿಕೊಂಡು ಆಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ತಾ.ಪಂ. ಸದಸ್ಯೆ ರತ್ನಾವತಿ ಜೆ.ಶೆಟ್ಟಿ, ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷ ಯತೀಶ್ ಎಂ. ಶೆಟ್ಟಿ, ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ. ಲಕ್ಷ್ಮಿ ನಾರಾಯಣ ಉಡುಪ, ಚೆನ್ನೈತ್ತೋಡಿ ಗ್ರಾ.ಪಂ.ಸದಸ್ಯ ಜಯರಾಮ ಶೆಟ್ಟಿ ಕಾಪು, ಹಾಪ್‌ಕಾಮ್ಸ್ ನಿರ್ದೇಶಕ ಜಯ ಕುಮಾರ್, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸುಂದರ ನಾಯ್ಕ, ವಾಮದಪದವು ವ್ಯ.ಸೇ.ಸ.ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ವಾಮದಪದವು ಕಲ್ಪವೃಕ್ಷ ತೆಂಗು ಬೆಳೆಗಾರರ ಸೊಸೈಟಿ ನಿರ್ದೇಶಕರು ಉಪಸ್ಥಿತರಿದ್ದರು.
ಮಂಗಳೂರು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಬಂಟ್ವಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಕೆ. ನಾರಾಯಣ ಶೆಟ್ಟಿ, ಬಂಟ್ವಾಳ ಸಹಾಯಕ ತೋಟಗಾರಿಕಾ ನಿರ್ದೇಶಕ ದಿನೇಶ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಾಪ್‌ಕಾಮ್ಸ್ ವತಿಯಿಂದ ರೈತರಿಗೆ ತರಕಾರಿ ಬೀಜ ಮತ್ತು ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರಕಾರದ ಉಜ್ವಲಾ ಯೋಜನೆಯ ಗ್ಯಾಸ್ ಸೌಲಭ್ಯವನ್ನು ಶಾಸಕ ರಾಜೇಶ್ ನಾಕ್ ಅವರು ವಿತರಿಸಿದರು.
ಹಾಪ್‌ಕಾಮ್ಸ್ ಕಾರ್ಯದರ್ಶಿ ಪ್ರಭಾಕರ ಜೈನ್ ಸ್ವಾಗತಿಸಿದರು. ನಿವೃತ್ತ ಬ್ಯಾಂಂಕ್ ಅಽಕಾರಿ ಜಿ.ಕೆ.ಭಟ್ ಪ್ರಸ್ತಾವಿಸಿದರು. ಮಂಗಳೂರು ಜನತಾ ಬಜಾರ್ ನಿರ್ದೇಶಕ ಪುರುಷೋತ್ತಮ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

