ಬಂಟ್ವಾಳ: ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಪ್ರಮುಖ ಆರೋಪಿ ಯನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಅವರು ಬಂಧಿಸಿದ್ದಾರೆ.


ಇಕ್ಬಾಲ್ ಅಲಿಯಾಸ್ ಮಟನ್ ಇಕ್ಬಾಲ್ ಬಂಧಿತ ಆರೋಪಿ. ಮಾರಣಾಂತಿಕ ಹಲ್ಲೆ, ದೊಂಬಿ, ಸರಕಾರದ ಕೆಲಸಕ್ಕೆ ಅಡ್ಡಿ ಇತ್ಯಾದಿ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾಗ ಈತನ ನ್ನು ಬಂದಿಸಿದ್ದಾರೆ.
ಆರೋಪಿತನ ಮೇಲೆ 1)ಅ.ಕ್ರ.179/06 u/s 143,147,1r8,427 r/w 149 ipc(ccno.367/08),
2)ಅ.ಕ್ರ.240/15 u/s 143,147,148,504,307,353,120(b) r/w 149 ipc(ccno.1716/17)
3)ಅ.ಕ್ರ. 49/17 u/s 341,504,324,506 r/w 34 ipc(ccno.1003/18)ಮತ್ತು
4)ಅ.ಕ್ರ.304/17 u/s 341,323,506 r/w 34 ipc(ccno.984/18)ಯಂತೆ ಪ್ರಕರಣ ದಾಖಲಾಗಿದ್ದು
ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡು ನಂತರ ನ್ಯಾಯಾಲಯ ದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದವನನ್ನು ದಿನಾಂಕ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪರ್ಲಿಯಾ ಎಂಬಲ್ಲಿ ಆರೋಪಿತನನ್ನು ದಸ್ತಗಿರಿ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ .
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಿ ಲಾಗಿದೆ.
ಕಾರ್ಯಚರಣೆ ಯಲ್ಲಿ ಅಪರಾಧ ವಿಭಾಗದ ಎಸ್.ಐ.ಹರೀಶ್, ಸಿಬ್ಬಂದಿ ಗಳಾದ ಗೋಣಿ ಬಸಪ್ಪ ಮಲಿಕ್ ಭಾಗವಹಿಸಿದ್ದರು