ಬಂಟ್ವಾಳ: ನೇತ್ರಾವತಿ ನದಿಗೆ ಸ್ನಾನ ಮಾಡಲು ಹೋದ ಅಯ್ಯಪ್ಪ ವ್ರತಾಧಾರಿಯೋರ್ವ ನೀರಿಗೆ ಬಿದ್ದು ಮೃತಪಟ್ಟ ಘಟನೆ ತುಂಬೆ ಡ್ಯಾಂ ಬಳಿ ನಡೆದಿದೆ.
ಕಳ್ಳಿಗೆ ಗ್ರಾಮದ ಮಾಡಂಗೆ ನಿವಾಸಿ ರಾಜ ಅವರ ಪುತ್ರ ಹರಿಪ್ರಸಾದ್ ( 23) ಅವರು ಮೃತಪಟ್ಟ ದುರ್ದೈವಿ .
ನಾಲ್ಕನೇ ಬಾರಿ ಶಬರಿಮಲೆ ಯಾತ್ರೆ ಕೈಗೊಂಡ ಇವರು ಈ ಬಾರಿ ಐದನೇ ಬಾರಿ ಶಬರಿಮಲೆಗೆ ತೆರಳಲಿದ್ದರು.
ನಾಳೆ ಬೆಳಿಗ್ಗೆ ಇವರು ಗಿರೀಶ್ ಗುರುಸ್ವಾಮಿಯ ಮತ್ತು ಸ್ನೇಹಿತರ ಜೊತೆ ಶಬರಿಮಲೆಗೆ ತೆರಳಲಿದ್ದರು.





ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಲಕ್ಮೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಇವರು ಮಾಲಾಧಾರಿಯಾಗಿ ತಂಗುತ್ತಿದ್ದರು. ಎಂದಿನಂತೆ ಇಂದು ಸುಮಾರು 11.30 ವೇಳೆ 5 ಜನ ಅಯ್ಯಪ್ಪ ಮಾಲಾಧಾರಿಗಳ ಜೊತೆ ತುಂಬೆ ಡ್ಯಾಂ ನ ಕೆಳಭಾಗಕ್ಕೆ ಸ್ನಾನ ಮಾಡಲೆಂದು ತೆರಳಿದ್ದರು. ಆದರೆ ಇವರಿಗೆ ಮೂರ್ಚೆ ಹೋಗುವ ಕಾಯಿಲೆ ಇದ್ದು ಇವತ್ತು ಕೂಡಾ ನೀರಿಗೆ ಇಳಿದು ಸ್ನಾನ ಮಾಡುವ ವೇಳೆ ಮೂರ್ಚೆ ಕಾಯಿಲೆ ಬಂದು ಮೃತಪಟ್ಟಿರಬೇಕು ಎಂದು ಇವರ ಜೊತೆ ತೆರಳಿದ ಸ್ನೇಹಿತರು ಸಂಶಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿ ಜಯರಾಮ್ ಕಾಯರಾ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.