ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು-ಮೆಲ್ಕಾರ್ ಸಮೀಪದ ರೆಂಗೇಲು ಬದ್ರಿಯಾ ಜುಮಾ ಮಸೀದಿ ಆಶ್ರಯದಲ್ಲಿ 15ನೇ ಸ್ವಲಾತ್ ವಾರ್ಷಿಕೋತ್ಸವ, ಬುರ್ದಾ ಮಜ್ಲಿಸ್ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ಫೆಬ್ರವರಿ 23 ಹಾಗೂ 24 ರಂದು ಇಲ್ಲಿನ ಮಸೀದಿ ವಠಾರದಲ್ಲಿನ ಮರ್ ಹೂಂ ಶೈಖುನಾ ತಾಜುಲ್ ಉಲಮಾ ಕೆ.ಕೆ. ಸ್ವದಖತುಲ್ಲಾ ವೇದಿಕೆಯಲ್ಲಿ ನಡೆಯಲಿದೆ.
ಆಲಡ್ಕ ಎಂಜೆಎಂ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಲಿದ್ದು, ಕೇರಳ ಎಸ್ ವೈ ಎಫ್ ಕೇಂದ್ರ ಸಮಿತಿ ಅಧ್ಯಕ್ಷ ಸಯ್ಯಿದ್ ಹಾಶಿಂ ಬಾಫಖಿ ತಂಞಳ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮಂಜೇರಿ ದಾರುಸ್ಸುನ್ನ ಅರಬಿಕ್ ಕಾಲೇಜು ಮುದರ್ರಿಸ್ ಮುಹಮ್ಮದ್ ಅಮೀನ್ ವಹಬಿ ಉದ್ಘಾಟಿಸುವರು. ಕೇರಳ ಸಂಸ್ಥಾನ ಜಂ-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಮೌಲಾನಾ ಎ ನಜೀಬ್ ಉಸ್ತಾದ್ ಹಾಗೂ ಮಂಜೇರಿ ದಾರುಸ್ಸುನ್ನ ಪ್ರೊಫೆಸರ್ ಅಬ್ದುಲ್ಲ ವಹಬಿ ಎಂ.ಡಿ. ಅರೂರು ಅವರು ಧಾರ್ಮಿಕ ಉಪನ್ಯಾಸಗೈಯುವರು.
ಮುಹಮ್ಮದ್ ಶಾಫಿ ಮುಫೀದಿ ತಿರುವನಂತಪುರಂ, ರೆಂಗೇಲು ಮಸೀದಿ ಖತೀಬ್ ಹೈದರ್ ಅಲಿ ಸಖಾಫಿ , ಮಸೀದಿ ಅಧ್ಯಕ್ಷ ಪಿ.ಆರ್. ಇದ್ದಿನಬ್ಬ, ರೆಂಗೇಲು ಬದ್ರಿಯಾ ಯೂತ್ ವಿಂಗ್ ಗೌರವಾಧ್ಯಕ್ಷ ಅಬೂಬಕ್ಕರ್ ರೆಂಗೇಲು ಮೊದಲಾದವರು ಭಾಗವಹಿಸುವರು.
ಮುಹಮ್ಮದ್ ಅನ್ಸಾರ್ ಮುಕ್ವೆ ನೇತೃತ್ವದ ಮರ್ಜಾನುತ್ತೈಬ ಬುರ್ದಾ ಇಖ್ವಾನ್ ಪುತ್ತೂರು ತಂಡದಿಂದ ಬುರ್ದಾ ಆಲಾಪನೆ ನಡೆಯಲಿದ್ದು, ಮಾಸ್ಟರ್ ಶಿಹಾನ್ ಉಳ್ಳಾಲ, ಮಾಸ್ಟರ್ ನೌಶಾದ್ ಹಾಗೂ ಮಾಸ್ಟರ್ ಅಝೀಂ ಅವರು ನ ಅತೇ ಶರೀಫ್ ಪ್ರಸ್ತುತಪಡಿಸುವರು ಎಂದು ಮಸೀದಿ ಕಾರ್ಯದರ್ಶಿ ಮುಹಮ್ಮದ್ ಬಶೀರ್ ರೆಂಗೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


