Wednesday, February 4, 2026

ಅನರ್ಹ ಪಡಿತರ ಚೀಟಿ ರದ್ದತಿಗೆ ದಂಡ ವಸೂಲಾತಿ ಕೈಬಿಡುವಂತೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯ

ಬಂಟ್ವಾಳ: ಜಿಲ್ಲೆಯಲ್ಲಿ ಅನರ್ಹ ಪಡಿತರ ಚೀಟಿ ರದ್ದತಿಗೆ ದಂಡ ವಸೂಲಿ ಮಾಡುತ್ತಿರುವ ಕ್ರಮದ ಬಗ್ಗೆ ಬಂಟ್ವಾಳ ಶಾಸಕರ ಕಚೇರಿಗೆ ಈ ದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿದ ಸಂಧರ್ಭದಲ್ಲಿ ಶಾಸಕರು ಸಚಿವರ ಗಮನ ಸೆಳೆದು ಇಲಾಖೆಯ ಈ ಕ್ರಮದಿಂದ ಬಡವರ್ಗದ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಯವರಲ್ಲಿ ಮಾತುಕತೆ ನಡೆಸಿ ದಂಡ ವಸೂಲಾತಿಯ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿ ಈ ಬಗ್ಗೆ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರೊಂದಿಗೆ ವಿಷಯದ ಬಗ್ಗೆ ಪ್ರಸ್ತಾಪಿಸುವುದಾಗಿ ತಿಳಿಸಿದರು.
ದಂಡ ವಸೂಲಾತಿಯ ಬಗ್ಗೆ ಸರಕಾರದಿಂದ ನೀಡಲಾದ ಆದೇಶ-ಸುತ್ತೋಲೆ ತಕ್ಷಣ ತನಗೆ ಕಳುಹಿಸಿಕೊಡುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

More from the blog

ಕುದ್ರೆಬೆಟ್ಟು : ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ – ನಾಲ್ವರಿಗೆ ಗಾಯ

ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಮೇಲತ್ಸುವೆಯ ಕೊನೆಯ ಭಾಗದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಅಳಕೆಮಜಿಲು ನಿವಾಸಿ ಅವ್ವಮ್ಮ ಹಾಗೂ ಸುಹೈಲ್ ರಿಕ್ಷಾ...

ಕಟೀಲು 7 ಮೇಳಗಳ ಫೆ.04ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಫೆ.04ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಫೆ.04ರ ಸೇವೆಯಾಟಗಳ ವಿವರ : ದೀಪಕ್ ಶೆಟ್ಟಿ, ಬೈಲುತೇಂಜ ಹೌಸ್, ಕಂದಾವರ,...

ಗೋಳ್ತಮಜಲು : ಮಲ ತ್ಯಾಜ್ಯ ನಿರ್ವಹಣಾ ಘಟಕದ ನಿರ್ವಹಣೆಯಲ್ಲಿ ಎಡವಿತಾ ಸ್ಥಳೀಯಾಡಳಿತ?

ಬಂಟ್ವಾಳ: ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಚಿಮಿಣಿಗುರಿಯಲ್ಲಿ ನಿರ್ಮಾಣಗೊಂಡಿರುವ ಬಹುಗ್ರಾಮ ಮಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸಾಮರ್ಥ್ಯದಷ್ಟು ತ್ಯಾಜ್ಯದ ಲೋಡ್ ಬಾರದೇ ಇದ್ದು, ಘಟಕದ ವ್ಯಾಪ್ತಿಗೆ ಬರುವ ಸ್ಥಳೀಯಾಡಳಿತಗಳು...

ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆ : ಕಾಗದ ಚೀಲ ತಯಾರಿಸಿದ ವಿದ್ಯಾರ್ಥಿಗಳು..

ಬಂಟ್ವಾಳ : ಬದಲಾವಣೆ ಎಂದರೆ ದೊಡ್ಡ ಕೆಲಸವಲ್ಲ. ಅದು ನಮ್ಮ ಮನೆಯಿಂದ, ನಮ್ಮ ಕೈಗಳಿಂದ ಆರಂಭವಾಗಬೇಕು.ಇಂದು ನಾವು ತೀರ್ಮಾನ ಮಾಡಿದರೆ –ಪ್ಲಾಸ್ಟಿಕ್ ಚೀಲಕ್ಕೆ “ಇಲ್ಲ” ಎಂದು ಹೇಳಿದರೆ, ಪೇಪರ್ ಅಥವಾ ಬಟ್ಟೆ ಚೀಲ...