ಬಂಟ್ವಾಳ: ಬೊರ್ ವೆಲ್ ತೋಡಿದಾಗ ನೀರು ಸಿಕ್ಕಿತು ಎಂದು ಖುಷಿಯಿಂದ ಕುಣಿದು ಕುಪ್ಪಳಿಸಿದ ನಾಗರಿಕರಿಗೆ ಕೆಲಕ್ಷಣದಲ್ಲಿಯೇ ನಿರಾಸೆ ಉಂಟಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯತ್ ಅನುದಾನದಲ್ಲಿ ತೊಡಲಾದ ಬೊರ್ ವೆಲ್ ಅದು ಪೈಪ್ ಲೈನ್ ತುಂಡು ಮಾಡಿದೆ ಎಂದು ಗೊತ್ತಾದಾಗ ಅಲ್ಲಿನ ಜನರಿಗೆ ಶಾಕ್ ಆಗಿದೆ.
ಈ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹರಿದಾಡುತ್ತಿದೆ.
ಘಟನೆಯ ವಿವರ:
ಸಜೀಪ ಮೂಡ ಗ್ರಾಮ ಪಂಚಾಯತ್ ಅನುದಾನದಲ್ಲಿ ಕಂದೂರು ನಲ್ಲಿ ಕುಡಿಯುವ ನೀರಿನ ಪೂರೈಕೆ ಗಾಗಿ ಬೋರ್ ಹಾಕಲು ಇಂದು ಸಂಜೆ ನಿಗದಿಪಡಿಸಲಾಗಿತ್ತು.
ನೀರು ಪರಿಶೋಧಕರು ನೀರು ಮೇಲ್ಬಾಗದಲ್ಲಿ ಸಿಗುತ್ತದೆ ಅಂಥ ಸೂಚನೆ ನೀಡಿ ಜಾಗ ಖಾತರಿಪಡಿಸಿದರು ,ಈದೀಗ ಬೋರ್ ವೇಲ್ ಲಾರಿ ಕೆಲಸ ಆರಂಭಿಸಿ ಕ್ಷರ್ಣದಲ್ಲಿ ರಭಸವಾಗಿ ನೀರು ಹೊರ ಚೆಮ್ಮಿತು, ಪರಿಸರದಲ್ಲಿ ನೀರಿನ ಹೊಳೆಯೇ ಹರಿಯಿತು, ಕೆಲಸಗಾರರಿಗೆ ಮತ್ತು ಸ್ಥಳೀಯರಿಗೆ ಆಶ್ಚರ್ಯದ ನಡುವೆ ಸಡಗರ ಸಂಭ್ರಮ ಮುಗಿಲು ಮುಟ್ಟಿತು, ಬಾರಿ ಜನ ಸೇರಿತ್ತು. ನೀರು ಸಿಕ್ಕಿದಾಗ ಯಾರಿಗೆ ತಾನೇ ಖುಷಿ ಆಗಲ್ಲ ನೀವೇ ಹೇಳಿ, ಆಮೇಲೆ?
ಈ ಸಂತೋಷ ಕ್ಷಣಕಾಲ ಮಾತ್ರ ಮತ್ತೆ ಗೊತ್ತಾಯಿತು ಅದು ಕೊಣಜೆಗೆ ನೀರು ಸರಬರಾಜು ಆಗುವ ಪೈಪ್ ಹೊಡೆದದ್ದು ಅಂಥ.
ಸ್ಥಳೀಯರಿಗೆ ನಿರಾಸೆಯ ನಡುವೆ ನಗುವಿಗೆ ಪಾರವೇ ಇರಲಿಲ್ಲ. ಬಳಿಕ ನೀರು ಸರಬರಾಜು ಮಾಡಲು ಮರು ಕಾಮಗಾರಿ ನಡೆಯಿತು.
ಇಂತಹ ಘಟನೆಗಳು ನಡೆಯುವ ಮುನ್ನವೇ ಎಚ್ಚೆತ್ತುಕೊಂಡು ಕೆಲಸ ಮಾಡಿದ್ದರೆ ಪೈಪ್ ನ ಕಾಮಗಾರಿಯ ಹಣವು ಉಳಿಯುತ್ತಿತ್ತು.