Tuesday, July 15, 2025

ಹಳೆಯ ಸೇತುವೆಯ ಲ್ಲಿ ಘನಗಾತ್ರದ ವಾಹನಗಳ ಸಂಚಾರ: ಕುಸಿತ ಬೀತಿ

ಬಂಟ್ವಾಳ: ಘನಗಾತ್ರದ ವಾಹನಗಳು ಪಾಣೆಮಂಗಳೂರು ಹಳೆಯ ಸೇತುವೆಯ ಮೂಲಕ ಸಂಚಾರ ಮಾಡುವುದರಿಂದ ನಿತ್ಯವೂ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಜೊತೆಗೆ ಪಾಣೆಮಂಗಳೂರು ಪೇಟೆಯಲ್ಲಿಯೂ ಬ್ಲಾಕ್ ತಪ್ಪಿದ್ದಲ್ಲ. ಕಳೆದ ಕೆಲ ತಿಂಗಳಿನಿಂದ ರಾಷ್ಟ್ರೀಯ ಹೆದ್ದಾರಿ ಯಲ್ಲಿನ ಹೊಂಡಗುಂಡಿಗಳಿಂದ ತಪ್ಪಿಸಿಕೊಳ್ಳಲು ಘನಗಾತ್ರದ ವಾಹನಗಳ ಸವಾರರು ಪಾಣೆಮಂಗಳೂರು ಪೇಟೆಯ ಮೂಲಕ ಹಳೆ ಸೇತುವೆಯಲ್ಲಿ ಸಂಚಾರ ಮಾಡುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ತೇಪೆ ಕಾರ್ಯ ನಡೆಸುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಬಸ್ ಸಹಿತ ಲಾರಿಗಳು ಇದೇ ಹಳೆಯ ಸೇತುವೆಯಲ್ಲಿ ಸಂಚಾರ ಮಾಡುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಈ ಹಳೆಯ ಸೇತುವೆ ದುರ್ಬಲವಾಗಿದ್ದು ಘನಗಾತ್ರದ ವಾಹನಗಳು ಸಂಚಾರ ಮಾಡಬಾರದು ಎಂಬ ನಾಮಫಲಕ ಸೇತುವೆ ಎರಡು ಬದಿಗಳಲ್ಲಿ ಹಾಕಲಾಗಿದೆ.
ಆದರೆ ಈ ಬೋರ್ಡ್ ನೇತಾಡಿಕೊಂಡಿದೆ ವಿನಃ ಯಾವುದೇ ಪ್ರಯೋಜನವಾಗಿಲ್ಲ. ಹಳೆಯ ಕಾಲದ ದುರ್ಬಲ ಸೇತುವೆಯ ಮುರಿದು ಬೀಳುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತವಾದ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕ ಆಗ್ರಹವಾವಾಗಿದೆ.

More from the blog

ಗೋಳ್ತಮಜಲು : ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಅವಿರೋಧ ಆಯ್ಕೆ..

ಬಂಟ್ವಾಳ : ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ 2025-26 ರ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಗೋಳ್ತಮಜಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಫಾತಿಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಾ ಮ್ಯಾನೇಜಿಂಗ್...

ನೇರಳಕಟ್ಟೆ : ಸರಕಾರಿ ಶಾಲಾ ನೂತನ ತರಗತಿ ಕೊಠಡಿಗಳ ಹಸ್ತಾಂತರ ಹಾಗೂ ಉದ್ಘಾಟನೆ..

ಬಂಟ್ವಾಳ : ನೇರಳಕಟ್ಟೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್. ಅನುದಾನ ಹಾಗೂ ಎನ್.ಎಮ್.ಪಿ.ಎ. ಸಂಸ್ಥೆಯ ಸಿ.ಎಸ್.ಆರ್. ನಿಧಿಯಿಂದ ನಿರ್ಮಾಣವಾದ ನೂತನ ತರಗತಿ ಕೊಠಡಿಗಳ ಹಸ್ತಾಂತರ ಹಾಗೂ ಉದ್ಘಾಟನಾ...

ಬಿ. ಸಿ. ರೋಡ್ ನಲ್ಲಿ ತೆಂಗು ಬೆಳೆ ಮಾಹಿತಿ ಸಂವಾದ

ಬಂಟ್ವಾಳ: ತೆಂಗು ಬೆಳೆಯ ಸೂಕ್ಷ್ಮತೆಯನ್ನು ತಿಳಿದುಕೊಳ್ಳಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತೆಂಗು ಬೆಳೆಗಾರ ಕೊಂಡಾಣ ಚಂದ್ರಶೇಖರ ಗಟ್ಟಿ ಹೇಳಿದರು. ಅವರು ಜು. 15ರಂದು ಬಿ ಸಿ ರೋಡ್ ರಂಗೋಲಿ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ...

ಅರಣ್ಯ ಗಸ್ತುಪಾಲಕ ಜಿತೇಶ್.ಪಿ.ಗೆ ಮುಖ್ಯಮಂತ್ರಿ ಪದಕ

ಮಂಗಳೂರು:  ಅರಣ್ಯ ಇಲಾಖೆಯ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಇವರು ಸುಮಾರು 20 ವರ್ಷಗಳಿಂದ ಪಂಜ, ಮಂಗಳೂರು, ಬಂಟ್ವಾಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬಂಟ್ವಾಳ...