Saturday, January 31, 2026

ಕಲುಷಿತ ನೀರು ನೀಡುತ್ತಿರುವ ಗ್ರಾಮ ಪಂಚಾಯತ್ ವಿರುದ್ಧ ಗ್ರಾಮಸ್ಥರ ಆಕ್ರೋಶ

ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ೩ನೆ ಬ್ಲಾಕ್‌ನಲ್ಲಿರುವ ನೀರು ಶುದ್ಧೀಕರಣ ಘಟಕವು ಹಾಳಾಗಿದ್ದು, ನೇರವಾಗಿ ನದಿಯ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಕುಡಿಯಲು ಅಯೋಗ್ಯವಾಗಿದ್ದು, ಇದರಿಂದ ಜನರು ರೋಗದ ಭೀತಿ ಎದುರಿಸುತ್ತಿದ್ದಾರೆ ಎಂದು ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಪ್ರಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಸಜೀಪಮುನ್ನೂರು ಗ್ರಾಪಂ ಸದಸ್ಯ ಹಂಝ ಮಾತನಾಡಿ, ಜಿಲ್ಲಾ ಪಂಚಾಯತ್ ಅನುದಾನದಡಿ ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ಸಜೀಪ ಮುನ್ನೂರು ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಅದಲ್ಲದೆ, ಇದರ ಕಾಮಗಾರಿ ಕಳಪೆ ಹಾಗೂ ಅಪೂರ್ಣವಾಗಿದ್ದು, ಕಳೆದ 8 ತಿಂಗಳಿಂದ ಘಟಕವು ಕಾರ್ಯನಿರ್ವಸುತ್ತಿಲ್ಲ. ಇದರಿಂದ ಜನರಿಗೆ ಕುಡಿಯಲು ನೇರವಾಗಿ ನದಿಯಿಂದಲೇ ನೀರು ಪೂರೈಕೆ ಮಾಡುತ್ತಿದೆ. ಈ ನೀರು ಕಲುಷಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ. ಇದರಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಅಭಾವ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಶುದ್ಧೀಕರಣ ಘಟಕವನ್ನು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಹಸ್ತಾಂತರ ಮಾಡಿಲ್ಲ. ಕುಡಿಯುವ ನೀರಿನ ಸಮಸ್ಯೆ ಹಾಗೂ ಘಟಕದ ಕಳಪೆ ಕಾಮಗಾರಿಯ ಬಗ್ಗೆ ಶಾಸಕ, ಜಿಲ್ಲಾಧಿಕಾರಿ, ಗ್ರಾಪಂ ಅಧ್ಯಕ್ಷ, ಪಿಡಿಒ ಸಹಿತ ಜಿಪಂ ಇಂಜಿನೀಯರ್ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಶುದ್ಧೀಕರಣ ನೀರಿನ ಘಟಕದಿಂದ ೧೦೦ ಮನೆಗಳಿಗೆ ಮಾತ್ರ ನೀರು ಸರಬರಾಜು ಆಗುತ್ತಿದೆ. ಆದರೆ, ಸಜೀಪ ಮುನ್ನೂರು ಗ್ರಾಮದಲ್ಲಿ ಸುಮಾರು ೭೫೬ ಮನೆಗಳಿಗೆ ತಲುಪುತ್ತಿಲ್ಲ ಎಂದು ಅವರು, ಎಲ್ಲ ಮನೆಗಳಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
೨೦ ದಿನಗಳೊಳಗೆ ಶುದ್ಧೀಕರಣ ಘಟಕವನ್ನು ಸರಿಪಡಿಸಿ, ಶುದ್ಧ ಕುಡಿಯುವ ನೀರು ಸರಬರಾಜಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಲ್ಲದಿದ್ದರೆ, ಗ್ರಾಮ ಪಂಚಾಯತ್‌ಗೆ ಬೀಗ ಜಡಿದು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಜೀಪಮುನ್ನೂರು ಗ್ರಾಪಂ ಸದಸ್ಯರಾದ ಮಜೀದ್ ಆಲಾಡಿ, ಸಮೀರ್ ನಂದಾವರ, ಗ್ರಾಮ ಸಮಿತಿಯ ಹಕೀಂ, ಫಾರೂಕ್, ಎಸ್‌ಡಿಪಿಐ ಸದಸ್ಯರಾದ ಸಿದ್ದೀಕ್, ಮುಸ್ತಫ, ಸಾದಿಕ್, ಸವಾದ್ ಉಪಸ್ಥಿತರಿದ್ದರು.

More from the blog

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...