Friday, January 30, 2026

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ (ರಿ.), ಗೀತಾಂಜಲಿ ಕಲ್ಯಾಣ ಮಂಟಪ, ಬಿ.ಸಿ.ರೋಡು 32ನೇ ವಾರ್ಷಿಕ ಮಹಾಸಭೆ

ಬಂಟ್ವಾಳ : ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ (ರಿ.), ಬಿ.ಸಿ.ರೋಡು ಇದರ ೩೨ನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡು ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಯು. ಸುರೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಕೋಶಾಧಿಕಾರಿ ಕೆ. ರಘುವೀರ್ ಕಾಮತ್ 2018-19ನೇ ಸಾಲಿನ ಲೆಕ್ಕ ಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ 2019-20ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಯು. ಸುರೇಶ್ ನಾಯಕ್ ಉಪಾಧ್ಯಕ್ಷರಾಗಿ ಆರ್. ಮಂಜುನಾಥ ಪೈ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಸುಬ್ರಹ್ಮಣ್ಯ ಪೈ, ಸರ್ವಾನುಮತದಿಂದ ಪುನರಾಯ್ಕೆಗೊಂಡರು. ಜತೆ ಕಾರ್ಯದರ್ಶಿಯಾಗಿ ಎನ್. ದುರ್ಗಾದಾಸ್ ಶೆಣೈ, ಬಿ. ಕೃಷ್ಣ ನಾಯಕ್, ಕೋಶಾಧಿಕಾರಿಯಾಗಿ ಬಿ. ಮಹೇಶ್ ನಾಯಕ್, ಸದಸ್ಯರಾಗಿ ಕೆ. ಶ್ರೀಧರ್ ಹೆಗ್ಡೆ, ಎಂ. ಕೇಶವ ಪ್ರಭು, ಕೆ. ರಘುವೀರ್ ಕಾಮತ್, ಎನ್. ನಾಗೇಂದ್ರ ನಾಯಕ್, ಎಸ್. ಪವನ್ ಕುಮಾರ್ ನಾಯಕ್ ಇವರು ಆಯ್ಕೆಯಾದರು. ಲೆಕ್ಕಪರಿಶೋದಕರಾಗಿ ಪಿ. ನರೇಂದ್ರ ಪೈ ಮಂಗಳೂರು ಇವರನ್ನು ಆಯ್ಕೆ ಮಾಡಲಾಗಿದೆ.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...