ಬಂಟ್ವಾಳ: ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಇರಾ ತಾಳಿತ್ತಬೆಟ್ಟು ಇಲ್ಲಿ ಮಂಚಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರ ಕಬಡ್ಡಿ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ವಹಿಸಿ ಒಬ್ಬ ವ್ಯಕ್ತಿಯು ಸದೃಢವಾಗಿರಬೇಕೆಂದರೆ ಮಾನಸಿಕ ಆರೋಗ್ಯದೊಂದಿಗೆ ದೈಹಿಕವಾಗಿಯೂ ಆರೋಗ್ಯವಾಗಿರಬೇಕು. ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆ ಬಹಳ ಸಹಾಯಕಾರಿ ಎಂದು ಹೇಳಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆಯಾದ ಚಂದ್ರಿಕಾ ಆರ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಬಂಟ್ವಾಳ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಮಂಚಿ ವಲಯ ಕ್ರೀಡಾಕೂಟದ ಅಧ್ಯಕ್ಷರಾದ ವಿಠಲ್ ನಾಯಕ್ ಹಾಗೂ ಕಾರ್ಯದರ್ಶಿಯಾದ ಶಶಿ ಬಿ, ಸಮೂಹ ಸಂಪನ್ಮೂಲ ವ್ಯಕ್ತಿಯಾದ ರೋಹಿಣಿ, ನಿಕಟಪೂರ್ವ ಅಧ್ಯಕ್ಷರಾದ ಮುರಳೀಧರ ಬಂಡಾರಿ, ಸುರಕ್ಷಾ ಸಮಿತಿ ಅಧ್ಯಕ್ಷರಾದ ಜಗನ್ನಾಥ ಪಕ್ಕಳ, ಊರಿನ ಹಿರಿಯರಾದ ವಾಮನ ಪೂಜಾರಿ ಮತ್ತು ಶಾಲಾ ಮುಖ್ಯ ಶಿಕ್ಷಕಿ ಸುಜಾತ ಟಿ.ಎಸ್ ರವರು ವೇದಿಕೆಯಲ್ಲಿದ್ದರು. ಎಸ್.ಡಿ.ಎಂ.ಸಿ, ಸುರಕ್ಷಾ ಸಮಿತಿ, ತಾಯಂದಿರ ಸಮಿತಿ, ಪೋಷಕರ ಸಮಿತಿ ಸದಸ್ಯರ, ಗ್ರಾಮದ ವಿವಿಧ ಸಂಘಗಳ, ಎಲ್ಲ ಶಿಕ್ಷಕರ, ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಸಹಕಾರ ದೊಂದಿಗೆ ನಿಗದಿತ ವೇಳಾಪಟ್ಟಿಯಂತೆ ಕಬಡ್ಡಿ ಸ್ಪರ್ಧೆಯನ್ನು ನಡೆಸಲಾಯಿತು. ವರುಣನ ಆಗಮನದ ನಡುವೆಯೂ ಕೂಡ ಕಳೆಗುಂದದ ಕ್ರೀಡಾಪ್ರೇಮ ನೆರೆದಿದ್ದ ಗ್ರಾಮಸ್ಥರು ಮತ್ತು ಕ್ರೀಡಾಭಿಮಾನಿಗಳಲ್ಲಿ ಕಾಣಿಸಿತು ಹಾಗೂ ಅಂತಿಮ ಹಂತದ ಪಂದ್ಯ ಮುಗಿಯುವವರೆಗೂ ಯುವಕ ಮಂಡಲ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಗೂ ಶಾಲಾ ಸಹ ಶಿಕ್ಷಕರಾದ ಜೋನ್ ಅಂತೋನಿ ಫೆರ್ನಾಂಡಿಸ್ ರವರು ವೀಕ್ಷಕ ವಿವರಣೆ ನೀಡಿದರು. ಅಂತಿಮ ಹಂತದ ಪಂದ್ಯದಲ್ಲಿ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಅಂಬರ್ ವ್ಯಾಲಿ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ ಸ್ಥಾನವನ್ನು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ ಸುರಿಬೈಲು, ದ್ವಿತೀಯ ಸ್ಥಾನವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಹಾಗೂ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಪ್ರೌ.ಶಾಲೆ ಮಂಚಿ ಕುಕ್ಕಾಜೆ, ದ್ವಿತೀಯ ಸ್ಥಾನವನ್ನು ಸ.ಪ್ರೌ.ಶಾಲೆ ಸಜೀಪ ನಡು ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಪ್ರೌ.ಶಾಲೆ ಸುರಿಬೈಲು, ಹಾಗೂ ದ್ವಿತೀಯ ಸ್ಥಾನವನ್ನು ಸ.ಪ್ರೌ.ಶಾಲೆ ಕಾಡುಮಠ ಪಡೆದುಕೊಂಡವು ನಂತರ ಗೆದ್ದ ತಂಡಗಳಿಗೆ ಕಪ್ ಮತ್ತು ಪ್ರಶಸ್ತಿ ಪತ್ರ ನೀಡಿ ಬೀಳ್ಕೊಡಲಾಯಿತು.