Tuesday, February 11, 2025

ವಸಂತಿ ಆಚಾರ್ಯರವರ ಚಿಕಿತ್ಸೆಗೆ ರೂ. 5 ಲಕ್ಷ ಪರಿಹಾರ

 ಬಂಟ್ವಾಳ: ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಈ ದಿನ ಗೃಹ ಕಚೇರಿ ಕೃಷ್ಣಾದಲ್ಲಿ ಬೇಟಿಯಾದರು. ಬಾಳ್ತಿಲ ಗ್ರಾಮದ ರಾಜೇಶ್ ಆಚಾರ್ಯ ಎಂಬವರ ಪತ್ನಿ ವಸಂತಿ ಎಂಬವರು ಬೆನ್ನುಹುರಿ ಮುರಿತದಿಂದ ಹಾಸಿಗೆ ಹಿಡಿದಿದ್ದು ಚಿಕಿತ್ಸೆಗಾಗಿ ಮಾನವೀಯ ನೆಲೆಯಲ್ಲಿ ಸ್ಪಂದಿಸಲು ಮಾನ್ಯ ಮುಖ್ಯಮಂತ್ರಿ ಯವರಲ್ಲಿ ವಿನಂತಿಸಿದಾಗ ವಿಶೇಷ ಪ್ರಕರಣವೆಂದು ಪರಿಗಣಿಸಿ ರೂ. 5 ಲಕ್ಷ ಚಿಕಿತ್ಸಾ ವೆಚ್ಚ ನೀಡಲು ಸಮ್ಮತಿಸಿದರು.

ಇತ್ತೀಚೆಗೆ ಶಾಸಕರು ವಸಂತಿಯವರ ಮನೆಗೆ ಬೇಟಿ ನೀಡಿ ಪರಿಸ್ಥಿಯನ್ನು ತಿಳಿದು ಚಿಕಿತ್ಸೆಗಾಗಿ ಸಹಕರಿಸುವ ಭರವಸೆ ನೀಡಿದ್ದರು.

More from the blog

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...

ಸಿಲಿಂಡರ್ ಸ್ಫೋಟ : ಓರ್ವನಿಗೆ ಗಾಯ

ಬಂಟ್ವಾಳ: ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಮನೆಯೊಂದರ ಅಡುಗೆ ಅನಿಲದ ಸಿಲಿಂಡರ್ ನಲ್ಲಿ ಸೋರಿಕೆಯುಂಟಾಗಿ ಬೆಂಕಿ ಕಾಣಿಸಿಕೊಂಡು, ಮನೆಯ ಸೊತ್ತುಗಳು ಸುಟ್ಟು ಭಸ್ಮವಾಗಿ, ಓರ್ವ ಗಾಯಗೊಂಡ ಘಟನೆ ನಡೆದಿದೆ. ಸುಭಾಷ್ ನಗರ ನಿವಾಸಿ...

ಬ್ಲಡ್ ಕ್ಯಾನ್ಸರ್ ಗೆ ಪೋಲಿಸ್ ಸಿಬ್ಬಂದಿ ಬಲಿ

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೋಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ ( 26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ. ಅವಿವಾಹಿತನಾಗಿದ್ದ ಅಭಿಷೇಕ್...

ಬಳ್ಳಮಂಜ ಕೈಲಾ ಧರ್ಮಚಾವಡಿ, ಬುನ್ನಾನ್ ಕುಟುಂಬಸ್ಥರ ತರವಾಡಿನ ನೂತನ ಮನೆಯ ಶಿಲಾನ್ಯಾಸ

ಬೆಳ್ತಂಗಡಿ : ಕಲ್ಲುರ್ಟಿ ಪಂಜುರ್ಲಿ ಮೈಸಂದಾಯ ಬನ್ನಾನ್ ಕುಟುಂಬಸ್ಥರ ಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ.)ಕೈಲಾ ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಇದರ ಕೈಲಾಧರ್ಮ ಚಾವಡಿ ಮತ್ತು ತರವಾಡುಮನೆಯ ಶೀಲಾನ್ಯಾಸ ಕಾರ್ಯಕ್ರಮ ಫೆ.9ರಂದು...