ಕೋಮು ಸೂಕ್ಷ ಪ್ರದೇಶ ವೆಂದೆ ಕುಖ್ಯಾತಿ ಪಡೆದ ಬಂಟ್ವಾಳದಲ್ಲಿ ಒಬ್ಬ ಸೌಹಾರ್ದತೆಯ ಹರಿಕಾರ ಬಂಟ್ವಾಳ ಪೇಟೆಯ ಸಾರ್ವಜನಿಕರ, ವ್ಯಾಪಾರಸ್ತರ ಪಾಲಿನ ಆಪತ್ಭಾಂದವ ರೆಂದೆ ಪ್ರಖ್ಯಾತರಾದ ಬಿಜೆಪಿ ಹಿರಿಯ ನಾಯಕ, ಕೌನ್ಸಿಲರ್ ಉದ್ಯಮಿಗಳೂ ಆದ ಗೋವಿಂದ ಪ್ರಭು……

ಮೊನ್ನೆ ಬಂದ ಪ್ರಳಯಾಂತಕ ಮಳೆಗೆ ನೆರೆ ಬಂದು ಅವಾಂತರ ಸೃಷ್ಟಿಸಿ ಅತಿ ಹೆಚ್ಚು ಮುಸ್ಲಿಂ ವ್ಯಾಪಾರಸ್ತರೇ ಅಧಿಕವಾಗಿರುವ ಇಡೀ ಮಾರ್ಕೆಟ್ ಅನ್ನು ಖುದ್ದು ನಿಂತು ತನ್ನ ಸ್ವಂತ ಖರ್ಚಿನಲ್ಲಿ ಮೋಟಾರು ಹಾಕಿ ಸ್ವಚ್ಛಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ
ತನ್ನ ಕಾರ್ಯ ವ್ಯಾಪ್ತಿಯಲ್ಲದಿದ್ದರೂ(ಪುರಸಭಾ ವಾರ್ಡ್) ನಾಳೆ ಬಕ್ರೀದ್ ಹಬ್ಬಕ್ಕೆ ಯಾರಿಗೂ ತೊಂದರೆಯಾಗಬಾರದೆಂದೂ ಹಾಗೂ ವ್ಯಾಪಾರಿಗಳಿಗೆ ಆದ ನಷ್ಟ ಪ್ರಮಾಣವನ್ನೂ ಶಾಸಕರಿಗೆ ಅದಿಕಾರಿಗಳಿಗೆ ತಿಳಿಸಿ ಸೂಕ್ತ ಪರಿಹಾರ ಕೊಡುವಂತೆಯೂ ಒತ್ತಡ ಹಾಕಿದ್ದ ಪ್ರಭುಗಳ ಬಗ್ಗೆ ಬರೆಯಲು ಪದವೇ ಸಿಗುತ್ತಿಲ್ಲ…..
ಬಂಟ್ವಾಳ ನಗರ (ಪೇಟೆ ಕೆಳಗಿನ ಪೇಟೆ) ಪರಿಸರದಲ್ಲಿ ಎಲ್ಲಿಯಾದರೂ ಅಹಿತಕರ ಘಟನೆ ನಡೆದರೆ ಖುದ್ದು ನಿಂತು ಪರಿಸ್ಥಿತಿಯನ್ನು ತಿಳಿಗೊಳಿಸಿ ಯಾರಿಗೂ ಹಾನಿಯಾಗದಂತೆ ನೋಡಿಕೊಳ್ಳುವುರಲ್ಲಿ ಇವರು ಎತ್ತಿದ ಕೈ…..
ಇದಕ್ಕೆಸ್ಪಷ್ಟ ಉದಾಹರಣೆಯೆಂದರೆ ಇಡೀ ದ.ಕ ಜಿಲ್ಲೆ ಹೊತ್ತಿ ಉರಿದಾಗಲೂ ಪೇಟೆಯಲ್ಲಿ ಅತಿ ಹೆಚ್ಚು ಮುಸ್ಲಿಂ ವ್ಯಾಪಾರಸ್ತರಿಗೆ ಈ ದಿನದ ವರೆಗೆ ಯಾವುದೇ ಸಾವು, ನೋವು, ನಷ್ಟ ಸಂಭವಿಸಿಲ್ಲ……..
ಎರಡೂ ಕಡೆಯ ಜನರು ಇವರ ಬಗ್ಗೆ ಅಭಿಮಾನ ಹೊದಿದ್ದು ಇವರ ಮಾತುಗಳನ್ನು ಪಾಲಿಸುತ್ತಿರುವುದೇ ಇವರ ಕಾರ್ಯಕ್ಷಮತೆಗೆ ಸಾಕ್ಷಿ…..