ಬಂಟ್ವಾಳ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸಮೀಪದ ಪೇರಿಮಾರಿನ ಮಸ್ಜಿದುಲ್ ಖಿಳ್ ರ್ ಜುಮಾ ಮಸೀದಿಯಲ್ಲಿ ಸೋಮವಾರ ಬಕ್ರೀದ್ ಆಚರಿಸಲಾಯಿತು. ಮಸೀದಿಯಲ್ಲಿ ನಡೆದ ಬಕ್ರೀದ್ ವಿಶೇಷ ಪ್ರಾರ್ಥನೆ ಹಾಗೂ ಖುತುಬಾ ನೇತೃತ್ವವನ್ನು ಖತೀಬ್ ರಫೀಕ್ ಸಅದಿ ಅಲ್‌ಅಫ್ಳಲಿ ವಹಿಸಿದ್ದರು. ಇದೇ ವೇಳೆ ನೆರೆ ಸಂತ್ರಸ್ತರಿಗಾಗಿ ಎಸ್ಸೆಸ್ಸೆಫ್, ಎಸ್‌ವೈಎಸ್ ಹಾಗೂ ಎಸ್‌ಬಿಎಸ್ ವತಿಯಿಂದ ಪರಿಹಾರ ಧನ ಸಂಗ್ರಹ, ಬಟ್ಟೆ ಬರೆಗಳು, ಆಹಾರ-ಸಾಮಗ್ರಿಗಳು, ಪಾತ್ರೆ ಪಗಡಿಗಳು ಹಾಗೂ ಇನ್ನಿತರ ತುರ್ತು ವಸ್ತುಗಳನ್ನು ಸಂಗ್ರಹಿಸಲಾಯಿತು.



ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಪೇರಿಮಾರ್ ಶಾಖಾ ಅಧ್ಯಕ್ಷ ನಝೀರ್ ಪೇರಿಮಾರ್, ಪ್ರಧಾನ ಕಾರ್ಯದರ್ಶಿ ರಹೀಂ ಬಿ.ಆರ್, ಕೋಶಾಧಿಕಾರಿ ಅಬ್ದುಲ್ ಸಮದ್ ಬಾಲ್ದಬೆಟ್ಟು, ಮಸ್ಜಿದುಲ್ ಖಿಳ್‌ರ್ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ ರಝಾಕ್.ಬಿ, ಜೊತೆ ಕಾರ್ಯದರ್ಶಿ, ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್, ಕೋಶಾಧಿಕಾರಿ ಬಿ. ಹುಸೈನ್ ಬಾಲ್ದಬೆಟ್ಟು, ಪೇರಿಮಾರ್ ಶಾಖಾ ಸದಸ್ಯ ಅಮೀನ್ ಬಾಲ್ದಬೆಟ್ಟು, ಅನ್ಸಾರ್, ಆಸಿಫ್ ಬಾಲ್ದಬೆಟ್ಟು ಉಪಸ್ಥಿತರಿದ್ದರು.