Tuesday, July 15, 2025

ನೂತನ ಲಾಂಛನ ಬಿಡುಗಡೆ

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಅರ್ಕುಳ ಮೇರ ಮಜಲು ಇದರ ನೂತನ ಲಾಂಛನ ವನ್ನು ಹರಿಕೃಷ್ಣ ಬಂಟ್ವಾಳ ನಿನ್ನೆ ಬಿಡುಗಡೆಗೋಳಿಸಿದರು. ಯುವಕರು ಇತಿಹಾಸ ನಿರ್ಮಿಸಬೇಕು , ಮಕ್ಕಳಿಗೆ ವಿದ್ಯೆ , ಸಂಸ್ಕಾರ ಮಾತ್ರವಲ್ಲ ಮಾನಸಿಕವಾಗಿಯೂ , ಶಾರೀರಿಕ ವಾಗಿಯೂ ಸುದೃಢ ರಾಗಬೇಕು , ಭಾರತ ವಿಶ್ವಗುರು ವಾಗುವಲ್ಲಿ ನಾವು ಮುಂದಿರಬೇಕು , ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿ ಯವರು ಒಂದು ಜಾತಿಗೆ ಸೀಮಿತ ವಾಗಿರಲಿಲ್ಲ ಇಡೀ ಜಗತ್ತಿಗೆ ಜಗದ್ಗುರು ವಾಗಿದ್ದರು ಎಂದು ಜಿಲ್ಲಾ ಬಿ ಜೆ ಪಿ ವಕ್ತಾರ ಬಿಲ್ಲವ ಮುಖಂಡರಾದ ಹರಿಕೃಷ್ಣ ರವರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ವೇದಿಕೆ ಹಾಗು ಮಹಿಳಾ ಸಂಘ ಅರ್ಕುಳ , ಮೇರಮಜಲು ಇವರ ವತಿಯಿಂದ ಜರಗಿದ ಆಟಿಡೊಂಜಿ ಕೂಟ 2019, ಮತ್ತು ಕುಸಲ್ದ ಪಂಥೊದ ಗೊಬ್ಬುಲು ಇದರಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರವೀಣ್ ಪೂಜಾರಿ ಮುಂಬೈ ಇವರ ಅಧ್ಯಕ್ಷತೆ ಯಲ್ಲಿ ನಡೆದ ಸಭಾ ಕಾರ್ಯಕ್ರಮ ವೇದಿಕೆಯಲ್ಲಿ ನಾಗರಾಜ್ ಭಟ್ R.T.O ಮಂಗಳೂರು, ಮೋಹನ್ ಅಮೀನ್ ವಿಜಯ ವಾಹಿನಿ , ಮಾದವ ನಾಯ್ಕ್ಅಡ್ಯಾರ್ ರಾಜಕುಮಾರ್ ಟ್ರಾವೆಲ್ಸ್ , ಸದಾನಂದ ಆಳ್ವ ಕಂಪ , ಜೆರಾಲ್ಡ್ ಡಿಸೋಜಾ , ಶಶಿರಾಜ್ ಶೆಟ್ಟಿ ಕೊಳಂಬೆ ಅಧ್ಯಕ್ಷರು ಬಂಟರ ಸಂಘ ಫರಂಗಿಪೇಟೆ ವಲಯ , ಲೋಕೇಶ್ ಪೂಜಾರಿ , ಪ್ರಭಾಕರ ಆಚಾರ್ಯ , ರಾಮ್ ದಾಸ್ ಕೋಟ್ಯಾನ್ ಮಜಿಲ ಗುತ್ತು , ಜಯರಾಜ್ ಕರ್ಕೇರ , ಸಂದೇಶ್ ತುಪ್ಪೆಕಲ್ಲು, ರಾಜೇಶ್ ಸುರಾ ಎಂಜಿನಿಯರ್ಸ್ , ಸಂದೀಪ್ ಶ್ರೀದೇವಿ ಕೇಬಲ್ಸ್ , ಎ ಶಿವರಾಜ್ ಶೆಟ್ಟಿ ಅಡ್ಯಾರು , ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ವೇದಿಕೆ ಅದ್ಯಕ್ಜ್ಶರಾದ ರಘುನಾಥ್ ಪೂಜಾರಿ ತುಪ್ಪೆಕಲ್ಲು, ಕಾರ್ಯದರ್ಶಿಗಳು , ಪದಾಧಿಕಾರಿಗಳು , ಮಹಿಳಾ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು, ಆಟಿ ತಿಂಗಳ ವಿಶೇಷ ಬಗೆ ಬಗೆಯ ಸುಮಾರು 50 ಖಾದ್ಯಗಳನ್ನು ವಿತರಿಸಲಾಯಿತು.

More from the blog

ಒಡಿಯೂರು ಶ್ರೀ ಜನ್ಮದಿನೋತ್ಸವ ಸೇವಾ ಸಂಭ್ರಮದ ಅಂಗವಾಗಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

ವಿಟ್ಲ : ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಬದುಕಿನ ಉತ್ತುಂಗಕ್ಕೆ ಕಾರಣವಾಗುತ್ತದೆ. ಬದುಕು ಪೂರ್ತಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಋತುವಿಗನುಗುಣವಾಗಿ ಹಿತ, ಮಿತ ಆಹಾರ ಸೇವಿಸಿದಾಗ ಉತ್ತಮ ಆರೋಗ್ಯ ಪಡೆಯಬಹುದು...

ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು ನಡೆಯಲು ಸಾಧ್ಯ- ಮಾಣಿಲಶ್ರೀ

ವಿಟ್ಲ: ನಮ್ಮ ಕಣ್ಣುಗಳಿಗೆ ಕಾಣದಿರುವ ಶಕ್ತಿಯೇ ದೇವರು. ದೇವರನ್ನು ಬಿಟ್ಟು ನಾವು ಯಾವ ಕಾರ್ಯವನ್ನೂ ಮಾಡಿದರೂ ನಿಷ್ಪ್ರಯೋಜಕ. ಉಸಿರು ಇದ್ದಷ್ಟು ದಿನ ಲೋಕಹಿತ ಕಾರ್ಯ ಮಾಡಬೇಕು. ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು...

ನೈಸರ್ಗಿಕ ವಿಪತ್ತುಗಳಿಗೆ ಮೂಲ ಕಾರಣವೆ ಅರಣ್ಯ ನಾಶ : ಮನೋಜ್ ಮಿನೇಜಸ್ 

ಬಂಟ್ವಾಳ: ನೈಸರ್ಗಿಕ ವಿಪತ್ತುಗಳಿಗೆ  ಮೂಲ ಕಾರಣವೆ ಅರಣ್ಯನಾಶ. ಜಲ ನೆಲ ಪ್ರಾಣಿ ಸಂಕುಲಗಳು ದೇವರ ಆಸ್ತಿ ಅವುಗಳನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನಮ್ಮದು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ .ಕಳೆದ 5 ವರ್ಷಗಳಿಂದ...

B.C. ROAD : ಕೆಂಪುಕಲ್ಲು, ಮರಳು ಅಭಾವ : ಬಂಟ್ವಾಳ ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ..

ಬಂಟ್ವಾಳ: ಕೆಂಪುಕಲ್ಲು ಕಲ್ಲಿನ ರಾಜಧನವನ್ನು 40 ರೂ.ಗಳಿಂದ 280 ರೂ.ಗಳಿಗೆ ಏರಿಕೆ ಮಾಡಿರುವ ರಾಜ್ಯ ಸರಕಾರವು ಮರಳು ತೆಗೆಯುವ ಕಾನೂನನ್ನೂ ಸರಳಗೊಳಿಸದೆ ಜನರಿಗೆ ಕದಿಯಲು ಪ್ರೇರಣೆ ನೀಡುತ್ತಿದೆ. ಕೆಂಪು ಕಲ್ಲು ಹಾಗೂ ಮರಳಿನ...