ಬಂಟ್ವಾಳ: ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಗಂಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಬೆಳಿಗಿನ ಉಪಹಾರದ ವ್ಯವಸ್ಥೆ ಮಾಡಲಾಯಿತು.

ಚಿತ್ರಾನ್ನ, ಇಡ್ಲಿ ಚಟ್ನಿ ಹಾಗೂ ಚಾ ವ್ಯವಸ್ಥೆಯನ್ನು ಮಾಡಲಾಗಿದ್ದು, ಪುರಸಭೆಯ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಉಪಹಾರ ವಿತರಣೆ ಮಾಡಿದರು.
ನೇತ್ರಾವತಿಯಲ್ಲಿ ಪ್ರವಾಹವೇರುವ ಅಪಾಯ ಇರುವ ಕಾರಣ ಗುರುವಾರ ರಾತ್ರಿ ಬಂಟ್ವಾಳದ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯಲ್ಲಿರುವ ಗಂಜಿಕೇಂದ್ರಕ್ಕೆ ನೇತ್ರಾವತಿ ತೀರದಲ್ಲಿರುವ ಸುಣ್ಣದಗೂಡು ಪ್ರದೇಶದ ಸುಮಾರು 80ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿತ್ತು.
