ಬಂಟ್ವಾಳ: ಭಾರತ್ ಸ್ವಾಭಿಮಾನ್ ಟ್ರಸ್ಟ್, ಪತಂಜಲಿ ಯೋಗ ಸಮಿತಿ ವತಿಯಿಂದ ಗಿಡಮೂಲಿಕ ದಿನಾಚರಣೆ ಹಾಗೂ ಔಷಧಿಯ ಸಸಿಗಳ ವಿತರಣಾ ಕಾರ್ಯಕ್ರಮ ಮಂಚಿ ಲಯನ್ಸ್ ಸೇವಾಮಂದಿರದಲ್ಲಿ ನಡೆಯಿತು. ಲಯನ್.ಡಾ.ಗೋಪಾಲ್ ಆಚಾರ್ ಸಭಾಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಡಾ.ಜ್ಙಾನೇಶ್ವರನಾಯಕ್ ಅವರು ಪತಂಜಲಿಯೋಗ ಪೀಠ ಹಾಗೂ ಆಚಾರ್ಯ ಬಾಲಕೃಷ್ಣಜೀಯವರ ಸಾಧನೆಯ ಬಗ್ಗೆ ಮಾಹಿತಿ ನೀಡಿದರು.

ಗಾಯತ್ರಿ ಮಹಂದಳೆ ಔಷಧೀಯ ಸಸ್ಯಗಳ ಮಾಹಿತಿ ಮತ್ತು ಉಪಯುಕ್ತತೆಯ ಬಗ್ಗೆ ವಿವರಿಸಿದರು.ಈ ಸಂದರ್ಭ ಹಿರಿಯ ಆರ್ಯವೇದ ವೈದ್ಯ ಗಣಪತಿ ಭಟ್ ಕುಕ್ಕಾಜೆ,ಗಾಯತ್ರಿ ಮಹಂದಳೆ ಅವರನ್ನು ಗೌರವಿಸಲಾಯಿತು.
ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳಾದ ರಾಘವೇಂದ್ರಜೀ,ಸುಜಾತಾ ಮಾರ್ಲ,ಕೇಶವ ಮಾರ್ಲ,ಸರಸ್ವತಿಜೀ,ಪ್ರದೀಪ್ ಜೀ,ಪ್ರಭಾಕರಜೀಯೋಗಶಿಕ್ಷಕರಾದ ಪದ್ಮನಾಭ ಸಾಲ್ಯಾನ್,ಲೋಕೇಶ್ ಪೂಜಾರಿ ಮೊದಲಾದವರಿದ್ದರು.ರಮೇಶ್ ರಾವ್ ಸ್ವಾಗತಿಸಿ,ಯಶೋದಾ ಬಿ ಶೆಟ್ಟಿ ವಂದಿಸಿದರು.ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.