ಬಂಟ್ವಾಳ: ಶಿಕ್ಷಣ ಕೇವಲ ಅಂಕಗಳಿಕೆಗೆ ಸೀಮಿತವಾಗದೇ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರೇರೇಪಣೆ ನೀಡುವಂತಿರಬೇಕು, ಪ್ರತಿಭಾಕಾರಂಜಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಹೆಚ್ಚಿಸುವ ಅತ್ಯುತ್ತಮ ವೇದಿಕೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಬಂಟ್ವಾಳ ಎಸ್. ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ತನ್ನ ತಾಯಿ,ಮಾವ 70 ವರ್ಷಗಳ ಹಿಂದೆ ಇದೇ ಎಸ್ ವಿ ಎಸ್ ಕನ್ನಡ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಗಳಾಗಿದ್ದರು.ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ತನ್ನ ಮಾವ ವೈದ್ಯರಾಗಿದ್ದರು.ತಾಯಿ ಬಂಟ್ವಾಳ ಅಂದಾಕ್ಷಣ ಈ ಶಾಲೆಯನ್ನು ಈಗಲು ನೆನಪಿಸುತ್ತಾರೆ ಹಾಗಾಗಿ ತನಗೂ ಬಂಟ್ವಾಳದ ನಂಟು ಬೆಳೆಯಿತು ಇಲ್ಲಿ ನ ಜನರ ಆಶೀರ್ವಾದದಿಂದ ಶಾಸಕನಾಗುವ ಭಾಗ್ಯ ಸಿಕ್ಕಿತು ಎಂದು ಮೆಲುಕು ಹಾಕಿದರು. ಶ್ರೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣ್ಯೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಿಕ್ಷಣ ಸಂಯೋಜಕಿ ಸುಶೀಲಾ,ಶಾಲಾ ಸಂಚಾಲಕರಾದ ಎ. ಗೋವಿಂದ ಪ್ರಭು, ಆಡಳಿತ ಮಂಡಳಿ ಸದಸ್ಯ ಶ್ರೀನಿವಾಸ್ ಪೈ,ಶಾಲಾ ಮುಖ್ಯೋಪಾಧ್ಯಾಯರಾದ ರೋಶನಿ ಡಿ’ಸೋಜ, ಕುಸುಮಾವತಿ ಉಪಸ್ಥಿತರಿದ್ದರು.
ಶಿಕ್ಷಣ ಸಂಯೋಜಕಿ ಸುಶೀಲ ಸ್ವಾಗತಿಸಿದರು. ಶಿಕ್ಷಕ ಮುರಳೀಧರ್ ಪ್ರಸ್ತಾವನೆಗೈದರು.
ಸಿ.ಆರ್. ಪಿ ರೇಷ್ಮಾ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಹಾಸ ಕಾರ್ಯಕ್ರಮ ನಿರ್ವಹಿಸಿದರು. 22 ಶಾಲೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.

