ಬಂಟ್ವಾಳ: ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿದ ಕ್ರಮ ಸ್ವಾಗತರ್ಹ ಎಂದು ಹೇಳಿದ ಹಿಂದುಜಾಗರಣ ವೇದಿಕೆ.
ಸಮಾಜದ ಸಾಮರಸ್ಯ ಮತ್ತು ಸ್ವಾಸ್ಥ್ಯ ವನ್ನು ಕಳೆದ ಕೆಲವು ದಿನಗಳಿಂದ ಕೆಡಿಸುತ್ತಿದ್ದ ಮತಾಂಧ ಟಿಪ್ಪು ಜಯಂತಿ ಯನ್ನು ಸರಕಾರ ಆಯೋಜಿಸಿ ಆಚರಣೆ ಮಾಡಿಕೊಂಡು ಬರುತ್ತಿದ್ದು ಕರ್ನಾಟಕ ಸರಕಾರಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು.
ಇದೀಗ ನೂತನಾವಗಿ ಆಯ್ಕೆ ಯಾದ ಯಡಿಯೂರಪ್ಪ ಸರಕಾರ ಜಯಂತಿಯನ್ನು ರದ್ದುಪಡಿಸಿ ಅದೇಶ ಹೊರಡಿಸಿರುವುದು ಸ್ವಾಭಿಮಾನ ರಾಷ್ಟ್ರ ಭಕ್ತ ಹೋರಾಟ ಗಾರರಿಗೆ ಸಿಕ್ಕಿದ ಜಯ ಎಂದು ಹೇಳಿದ್ದಾರೆ.
ಜೊತೆಗೆ ಟಿಪ್ಪು ವಿರೋಧಿ ಅಂದೋಲನದಲ್ಲಿ ಭಾಗಿಯಾದ ಹುತಾತ್ಮರ ಬಲಿದಾನವೂ ವ್ಯರ್ಥವಾಗಿಲ್ಲ ಎಂದು ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಘಟಕ ಹೇಳಿದ್ದಲ್ಲದೆ ಯಡಿಯೂರಪ್ಪ ಅವರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.
ಅಲ್ಲದೆ ಟಿಪ್ಪು ಜಯಂತಿ ಆಚರಣೆ ವಿರುದ್ಧ ನಡೆದ ಅಂದೋಲನದಲ್ಲಿ ಭಾಗಿಯಾದ ಯುವಕರ ಮೇಲೆ ಅಂದಿನ ಸರಕಾರ ಹಾಕಿರುವ ಕೇಸನ್ನು ಸರಕಾರ ವಾಪಾಸು ಪಡೆಯುವಂತೆ ಹಿ.ಜಾ.ವೇ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿಸಿರೋಡು ಹಾಗೂಬಂಟ್ವಾಳ ಹಿಂ.ಜಾವೇ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಚಂದ್ರ ಕಲಾಯಿ ಹಾಗೂ ಬಂಟ್ವಾಳ ವಿಭಾಗದ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

