ಬಂಟ್ವಾಳ: ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 1963ರಲ್ಲಿ ಸ್ಥಾಪನೆಯಾದ ಬಳಿಕ ಸೇವೆ ಸಲ್ಲಿಸಿದ ಅಧ್ಯಕ್ಷರುಗಳು ಭಾವಚಿತ್ರಗಳ ಅನಾವರಣ ಕಾರ್ಯಕ್ರಮ ನಡೆಯಿತು. ಬ್ಯಾಂಕಿನ ಮಾಜಿ ಅಧ್ಯಕ್ಷ, ಮಾಜಿ ಸಚಿವರಾದ ಬಿ.ರಮಾನಾಥ ರೈ ಅವರು ಭಾವಚಿತ್ರಗಳ ಅನಾವರಣಗೊಳಿಸಿ ಮಾತನಾಡಿ, ರಾಜ್ಯದ 177 ಪಿಎಲ್ ಡಿ ಬ್ಯಾಂಕ್ ಗಳಲ್ಲಿ ಉಭಯ ಜಿಲ್ಲೆಯ ಪಿಎಲ್ ಡಿ ಬ್ಯಾಂಕ್ ಗಳು ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆಗೈದಿರುವುದು ಅಭಿನಂದನೀಯವಾಗಿದೆ. ರೈತರಿಗೆ ಸಕಾಲದಲ್ಲಿ ಸಾಲನೀಡಿ ಅವರ ಅಭಿವೃದ್ದಿಯಲ್ಲಿಯೂ ಬ್ಯಾಂಕ್ ಮಹತ್ತರವಾದ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದರು. ಬಂಟ್ವಾಳ ಭೂ ಬ್ಯಾಂಕ್ ನಲ್ಲಿ ಅಧ್ಯಕ್ಷನಾಗಿದ್ದುಕೊಂಡು ರಾಜಕೀಯ ಜೀವನ ಆರಂಭಿಸಿರುವುದನ್ನು ಮೆಲುಕು ಹಾಕಿದ ರೈ ಅವರು ಪ್ರಸ್ತುತ ಬಂಟ್ವಾಳ ಭೂ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಜಿಲ್ಲೆಯಲ್ಲೆ ಉತ್ತಮ ಸಾಧನೆಮಾಡಿದ್ದು, ಇದಕ್ಕೆ ಶ್ರಮಿಸಿದ ಬ್ಯಾಂಕಿನ ಆಡಳಿತ ಮಂಡಳಿ, ಸಿಬಂದಿಗಳನ್ನು ಅಭಿನಂದಿಸಿದರು. ಬ್ಯಾಂಕಿನ ಅಧ್ಯಕ್ಷ ಪ್ರಸ್ತಾವಿಸಿ, ಸ್ವಾಗತಿಸಿದರು. ಉಪಾಧ್
