ಬಂಟ್ವಾಳ: ತಾಲೂಕಿನ ವಾಮದಪದವು ಸಮೀಪದ ಪಿಲಿಮೊಗ್ರು ಗ್ರಾಮದಲ್ಲಿ ಬಿಜೆಪಿ ಸಂಘಟನಾ ಪರ್ವ 2019 ಸದಸ್ಯತ್ವ ಅಭಿಯಾನ ಪ್ರಯುಕ್ತ ವನಮಹೋತ್ಸವದ ಮೂಲಕ ಚಾಲನೆ ನೀಡಲಾಯಿತು.


ಪೆಜಕ್ಕಳ ಶ್ರೀ ವಿಷ್ಣಮೂರ್ತಿ ದೇವಸ್ಥಾನದ ಮೊಕ್ತೇಸರರಾದ ರಾದಕೃಷ್ಣ ಭಟ್ ಅವರು ಸಸಿ ನಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜನತಾ ಬಜಾರ್ ನಿರ್ದೇಶಕ ಪುರುಷೋತ್ತಮ ಶೆಟ್ಟಿ ವಾಮದಪದವು, ಪಕ್ಷದ ಪ್ರಮುಖರಾದ ವಿನೋದ ಪೂಜಾರಿ, ರೂಪೇಶ್, ದಿನೇಶ್ ಶೆಟ್ಟಿ, ಶ್ರೇಯಸ್ ಮೊದಲಾದವರಿದ್ದರು.