Tuesday, February 11, 2025

ತೆರಿಗೆಯೊಂದಿಗೆ ಕಸದ ಶುಲ್ಕ ವಸೂಲಿ ಕೈ ಬಿಡುವಂತೆ ಆಗ್ರಹಿಸಿ ಪ್ರತಿಭಟನೆಗೆ ನಿರ್ಧಾರ

ಬಂಟ್ವಾಳ: ಸ್ವಯಂಘೋಷಿತ ಆಸ್ತಿ ತೆರಿಗೆಯ ಜೊತೆಗೆ ಕಸಸಂಗ್ರಹಣೆಯ ಶುಲ್ಕವನ್ನು ವಸೂಲಿ ಮಾಡುವ ಪ್ರಸ್ತಾಪ ಮತ್ತೆ ಮುನ್ನಲೆಗೆ ಬಂದಿದ್ದು, ಪುರಸಭೆಯ ಮುಖ್ಯಾಧಿಕಾರಿಯ ಈ ಜನವಿರೋಧಿ ನೀತಿಯ ಬಗ್ಗೆ ಪುರವಾಸಿಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆಗೆ ಮುಂದಾಗಿದೆ. ಈ ಸಮಿತಿಯ ವತಿಯಿಂದ ಜು.23 ರಂದು ಪುರಸಭೆಯ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. ಜನಪ್ರತಿನಿಧಿಗಳ ಆಡಳಿತ ಇಲ್ಲದಾಗಲೇ ಸರಕಾರದ ಸುತ್ತೋಲೆಯ ನೆಪದಲ್ಲಿ ಪುರಸಭೆಯ ಮುಖ್ಯಾಧಿಕಾರಿಯವರು ಸ್ವಯಂ ಘೋಷಿತ ಆಸ್ತಿ ತೆರಿಗೆಯ ಜೊತೆಯಲ್ಲಿ  ತೀರಾ ಅವೈಜ್ಞಾನಿಕ ವಾಗಿ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುತ್ತಿರುವುದು ಪುರಸಭೆಯ ಅಧಿಕಾರಿಯವರ ಜನವಿರೋಧಿ ಕ್ರಮವಾಗಿದೆ ಎಂದು ಸಮಿತಿ ಆರೋಪಿಸಿದೆ. ಪುರಸಭಾ ವ್ಯಾಪ್ತಿಯ ಕೆಲ ಭಾಗಗಳಿಗೆ ಈಗಲೂ ಕಸ ಸಂಗ್ರಹದ ವಾಹನಗಳು ತೆರಳದಿದ್ದರೂ, ಅಧಿಕಾರಿಗಳು ತೆರಿಗೆಯ ಜೊತೆ ಕಸದ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಸಮಿತಿ ಪ್ರಕಟಣೆಯಲ್ಲಿ ದೂರಿದೆ.   ತೆರಿಗೆಯ ಜೊತೆ ಕಸದ ಶುಲ್ಕ ವಸೂಲಿಯನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಸಮಾನಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬೀದಿಗಿಳಿದಿದ್ದು, ಪುರವಾಸಿಗಳಿಂದಲೂ  ಬೆಂಬಲ ವ್ಯಕ್ತವಾಗಿದೆ.

More from the blog

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...

ಸಿಲಿಂಡರ್ ಸ್ಫೋಟ : ಓರ್ವನಿಗೆ ಗಾಯ

ಬಂಟ್ವಾಳ: ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಮನೆಯೊಂದರ ಅಡುಗೆ ಅನಿಲದ ಸಿಲಿಂಡರ್ ನಲ್ಲಿ ಸೋರಿಕೆಯುಂಟಾಗಿ ಬೆಂಕಿ ಕಾಣಿಸಿಕೊಂಡು, ಮನೆಯ ಸೊತ್ತುಗಳು ಸುಟ್ಟು ಭಸ್ಮವಾಗಿ, ಓರ್ವ ಗಾಯಗೊಂಡ ಘಟನೆ ನಡೆದಿದೆ. ಸುಭಾಷ್ ನಗರ ನಿವಾಸಿ...

ಬ್ಲಡ್ ಕ್ಯಾನ್ಸರ್ ಗೆ ಪೋಲಿಸ್ ಸಿಬ್ಬಂದಿ ಬಲಿ

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೋಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ ( 26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ. ಅವಿವಾಹಿತನಾಗಿದ್ದ ಅಭಿಷೇಕ್...

ಬಳ್ಳಮಂಜ ಕೈಲಾ ಧರ್ಮಚಾವಡಿ, ಬುನ್ನಾನ್ ಕುಟುಂಬಸ್ಥರ ತರವಾಡಿನ ನೂತನ ಮನೆಯ ಶಿಲಾನ್ಯಾಸ

ಬೆಳ್ತಂಗಡಿ : ಕಲ್ಲುರ್ಟಿ ಪಂಜುರ್ಲಿ ಮೈಸಂದಾಯ ಬನ್ನಾನ್ ಕುಟುಂಬಸ್ಥರ ಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ.)ಕೈಲಾ ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಇದರ ಕೈಲಾಧರ್ಮ ಚಾವಡಿ ಮತ್ತು ತರವಾಡುಮನೆಯ ಶೀಲಾನ್ಯಾಸ ಕಾರ್ಯಕ್ರಮ ಫೆ.9ರಂದು...