Sunday, February 9, 2025

’ಅಡಕೆ ನಿಷೇಧದ ಬಗ್ಗೆ ಗೊಂದಲ ಬೇಡ’-ನಳಿನ್

ವಿಟ್ಲ: ಸನ್ಮಾನ ಅಭಿನಂದನೆಗಳು ಕಾರ್‍ಯಕರ್ತರಿಗೆ ಸಲ್ಲಬೇಕಾದ್ದು, ಅವರ ಪರಿಶ್ರಮದ ಫಲವಾಗಿ ನಮ್ಮ ವಿಜಯವಾಗಿದೆ. ಭ್ರಷ್ಟಾಚಾರದಿಂದ ರೋಸಿ ಹೋದ ಜನರು ಮೋದಿಯವರನ್ನು ಆಯ್ಕೆ ಮಾಡಿದ್ದು, ಅವರ ಆಡಳಿತವನ್ನು ಮೆಚ್ಚಿ ಮತ್ತೆ ಜನರು ಆಯ್ಕೆ ಮಾಡಿದ್ದಾರೆ. ವಿಸ್ತಾರವಾದ ಆಡಳಿತ ವ್ಯವಸ್ಥೆಯಲ್ಲಿ ಲೋಕಸಭಾ ಸದಸ್ಯನ ಇತಿ ಮಿತಿಯಲ್ಲಿ ಕೆಲಸ ಕಾರ್‍ಯಗಳನ್ನು ಮಾಡುತ್ತೇನೆ. ಅಡಕೆ ನಿಷೇಧದ ಬಗ್ಗೆ ಬೆಳೆಗಾರರು ಯಾವುದೇ ಗೊಂದಲ ಪಡಬೇಕಾಗಿಲ್ಲ. ಅಡಕೆ ಆಹಾರ ವಸ್ತು ಎಂದು ಮಾಡಲು ಮೋದಿ ಸರಕಾರ ಬದ್ಧವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ವಿಟ್ಲ ನಗರ ಬಿಜೆಪಿ ಸಮಿತಿ ವತಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ದುಡಿದ ಕಾರ್‍ಯಕರ್ತರಿಗೆ, ಪೇಜ್ ಪ್ರಮುಖರಿಗೆ ಹಾಗೂ ಮತದಾರ ಬಾಂಧವರಿಗೆ ಅಭಿನಂದನಾ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಸರಕಾರದ ಒಂದು ವರ್ಷದ ಆಡಳಿತ ವೈಖರಿಯಿಂದ ಅವಶ್ಯಕ ಕೆಲಸ ಮಾಡಿಸಲೂ ಬೇಕಾದ ಹಣ ಇಲ್ಲದ ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್ ಶಾಸಕರಿಗೆ ಅವರ ನಾಯಕರ ಮೇಲೆಯೇ ವಿಶ್ವಾಸ ಇಲ್ಲದ ಪರಿಸ್ಥಿತಿ ನಿರ್‍ಮಾಣವಾಗಿದೆ. ಮುಂದಿನ ಒಂದು ತಿಂಗಳ ಒಳಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವುದು ನಿಶ್ಚಿತ ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ವೈಯಕ್ತಿಕ ಅಭಿಪ್ರಾಯಕ್ಕಿಂತ ದೇಶದ ಹಿತ ಮುಖ್ಯ ಎಂಬುದನ್ನು ತಿಳಿಯಬೇಕು. ದೇಶದ ಏಕತೆ ಸಮಗ್ರತೆಗಾಗಿ ಕಾರ್‍ಯಕರ್ತರು ದುಡಿದು ಮೋದಿಯವರನ್ನು ಗೆಲ್ಲಿಸಿದ್ದಾರೆ. ಎಲ್ಲರ ವಿಕಾಸವನ್ನು ಬಯಸಿದ ಪ್ರಧಾನಿ, ಕಟ್ಟ ಕಡೆಯ ವ್ಯಕ್ತಿಗೂ ಅಗತ್ಯವಾದ ಯೋಜನೆಯನ್ನು ನೀಡಿದ್ದಾರೆ. ಬಿಜೆಪಿಗೆ ತಂತ್ರ ಕುತಂತ್ರ ಮಾಡಿ ಅಧಿಕಾರ ಮಾಡುವ ಅಗತ್ಯವಿಲ್ಲ. ಸ್ವ-ಇಚ್ಛೆಯಿಂದ ಬರುವವರವನ್ನು ಸ್ವಾಗತಿಸದೇ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಜನರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿದರು. ಪಕ್ಷದ ಹಿರಿಯ ಕಾರ್‍ಯಕರ್ತರಾದ ಸಂಕಪ್ಪ ಗೌಡ, ಜತ್ತಪ್ಪ ಗೌಡ, ರಮಾನಾಥ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಮಂತ್ರಿಗಳ ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಯಿತು. 18 ವಾರ್ಡಿನ ಪೇಜು ಪ್ರಮುಖರನ್ನು ಗೌರವಿಸಲಾಯಿತು. ದೇಶ ಪ್ರೇಮಿ ಇಬ್ರಾಹಿಂ ಮಾಮೇಶ್ವರ ಅವರ ಮೊಬೈಲ್ ಟೀ ಕ್ಯಾಂಟೀನ್‌ಗೆ ಚಾಲನೆ ನೀಡಲಾಯಿತು.
ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜೀವ ಭಂಡಾರಿ, ವಿಟ್ಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ ವಿಟ್ಲ, ಮಂಡಲ ಪ್ರಧಾನ ಕಾರ್‍ಯದರ್ಶಿ ಶಂಭು ಭಟ್, ಹೆಚ್. ಜಗನ್ನಾಥ ಸಾಲ್ಯಾನ್, ನಗರ ಸಮಿತಿ ಉದಯಕುಮಾರ್ ಆಲಂಗಾರು ಉಪಸ್ಥಿತರಿದ್ದರು.
ನಗರ ಸಮಿತಿ ಅಧ್ಯಕ್ಷ ಮೋಹನದಾಸ ಸ್ವಾಗತಿಸಿದರು. ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ಎಂ ವಿಟ್ಲ ವಂದಿಸಿದರು. ಹರೀಶ್ ವಿಟ್ಲ ಕಾರ್‍ಯಕ್ರಮ ನಿರೂಪಿಸಿದರು.

More from the blog

ಯುವ ಸಂಗೀತೋತ್ಸವಕ್ಕೆ ಚಾಲನೆ

ಮಂಗಳೂರು: ಸಾಮಾಜಿಕ ಸ್ವಾಸ್ಥ್ಯ ಕ್ಕಾಗಿ ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್...

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...

ಜುಗಾರಿ ಅಡ್ಡೆಗೆ ದಾಳಿ: ಹತ್ತು ಜನರ ಬಂಧನ

ಬಂಟ್ವಾಳ: ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಹಾಗೂ ಸಾವಿರಾರು...

ಮಾರ್ಬಲ್ ಲಾರಿ ಪಲ್ಟಿ

ಬಂಟ್ವಾಳ: ಮಾರ್ಬಲ್ ಲೋಡ್ ಲಾರಿಯೊಂದು ತಾಂತ್ರಿಕ ದೋಷದಿಂದ ರಸ್ತೆಯ ವಿಭಾಜಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಮಂಗಳೂರು- ಬೆಂಗಳೂರು ರಸ್ತೆಯ ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ...