ಬಂಟ್ವಾಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ)ಬಂಟ್ವಾಳ ತಾಲೂಕು ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಧರ್ಮಸ್ಥಳ
ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಾಭಿಷೇಕದ ಪ್ರಯಕ್ತ ಜನಮಂಗಲ ಕಾರ್ಯಕ್ರಮ ದಡಿ ನಿರ್ಗತಿಕ /ವಿಕಲಚೇತನರಿಗೆ ಸಲಕರಣೆ ವಿತರಣಾ ಕಾರ್ಯಕ್ರಮ ಬಂಟ್ವಾಳ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ದ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಅವರು ನಮ್ಮೂರ ನಮ್ಮ ಕೆರೆ ಯೋಜನೆ , ಕುಡಿಯುವ ನೀರಿನ ಶುದ್ದಗಂಗಾ ಕಾರ್ಯಕ್ರಮ , ಹೀಗೆ ಸಮುದಾಯದ ಅನೇಕ ಸಮಸ್ಯೆ ಗಳಿಗೆ ವಿಶೇಷ ವಾಗಿ ಸ್ಪಂದಿಸುವ ಕೆಲಸ ವೀರೇಂದ್ರ ಹೆಗ್ಗಡೆ ವರ ಮುಂದಾಳ್ವತ್ವದಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರದ ನೂತನ ಕನಸು ಗಳು ಸಾಕಾರಗೊಳ್ಳಲು ನಾವೆಲ್ಲರೂ ಕಟಿಬದ್ದರಾಗಬೇಕು, ಸರಕಾರದ ನೂರಾರು ಸಬ್ಸಿಡಿ ಯೋಜನೆ ಗಳು ಯೋಜನೆ ಮೂಲಕ ಜೋಡಿಸಿಕೊಂಡು ಆರ್ಥಿಕ ವಾಗಿ ಸದೃಡವಾಗಲು ಕರೆ ನೀಡಿದರು.
ಸರಕಾರದ ಜೊತೆಯಲ್ಲಿ ಅಭಿವೃದ್ಧಿ ಯ ಕನಸನ್ನು ನಾವು ಮೈಗೂಡಿಸಿಕೊಂಡು ಹೋಗೋಣ ಎಂದು ಅವರು ಹೇಳಿದರು.
ಸ್ವ ಸಹಾಯ ಸಂಘದ ಗುರಿ ಸ್ಪಷ್ಟವಾಗಿ ಇರಬೇಕು.
ಅವಕಾಶವನ್ನು ಬಳಕೆ ಮಾಡಿಕೊಂಡು ಜೀವನ ದ ಭದ್ರತೆಯನ್ನು ಮಾಡುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ,ಗ್ರಾಮಾಭಿವೃದ್ದಿ ಯೋಜನೆಯ ಟ್ರಸ್ಟ್ ನ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಕೇಂದ್ರ ಒಕ್ಕೂಟ ತಾಲೂಕು ಸಮಿತಿ ಅದ್ಯಕ್ಷ ಮಾಧವ ವಳವೂರು, ಬಿ.ಸಿ.ರೋಡ್ ವಲಯದ ಅಖಿಲ ಕರ್ನಾಟಕ ಜಾಗೃತಿ ವೇದಿಕೆ ವಲಯಾಧ್ಯಕ್ಷ ರೋನಾಲ್ಡ್ ಡಿ.ಸೋಜ, ಮಾಜಿ ವಲಯಾಧ್ಯಕ್ಷ ಸದಾನಂದ ನಾವೂರ, ಪತ್ರಕರ್ತರಾದ ಹರೀಶ್ ಮಾಂಬಾಡಿ , ವೆಂಕಟೇಶ್ ಬಂಟ್ವಾಳ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ , ಬಿಸಿರೋಡ್ ವಲಯ ಮೇಲ್ವಿಚಾರಕ ಕೇಶವ ಹಾಗೂ ಒಕ್ಕೂಟದ ಅಧ್ಯಕ್ಷರು ಹಾಗೂ ಪಧಾದಿಕಾರಿಗಳು ಮತ್ತಿರರು ಉಪಸ್ಥಿತರಿದ್ದರು. ಸುಮಾರು 75 ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಯಿತು.
ಟ್ರಸ್ಟನ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿ, ಮೇಲ್ವಿಚಾರಕಿ ಅಶ್ವಿನಿ ವಂದಿಸಿದರು. ಮೇಲ್ವಿಚಾರಕಿ ಹರಿನಾಕ್ಷೀ ಕಾರ್ಯಕ್ರಮ ನಿರೂಪಿಸಿದರು.