ಬಂಟ್ವಾಳ : ಬಂಟ್ವಾಳ ತಾಲೂಕು ಪ್ರಿಂಟರ್‍ಸ್ ಎಸೋಸಿಯೇಶನ್‌ನ ವಾರ್ಷಿಕ ಮಹಾಸಭೆಯು ಜುಲೈ 7ರಂದು ಬೆಳಿಗ್ಗೆ 9ಕ್ಕೆ ಬಿ.ಸಿ.ರೋಡಿನ ಹೊಟೇಲ್ ಸತ್ಯನಾರಾಯಣ ಲಂಚ್ ಹೋಂನಲ್ಲಿ ನಡೆಯಲಿರುವುದು. ಬಂಟ್ವಾಳ ತಾಲೂಕಿನ ಎಲ್ಲಾ ಮುದ್ರಣ ಘಟಕಗಳ ಮಾಲಿಕರು ಈ ಸಭೆಯಲ್ಲಿ ಭಾಗವಹಿಸಬೇಕೆಂದು ಎಸೋಸಿಯೇಶನ್‌ನ ಕಾರ್ಯದರ್ಶಿ ಯಾದವ ಕುಲಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
