Wednesday, February 12, 2025

ಪಾಕೃತಿಕ ವಿಕೋಪದಡಿ ಹಾನಿಯಾದ ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡಿ : ತಾ.ಪಂ.ಸಭೆಯಲ್ಲಿ ಸದಸ್ಯರ ಆಗ್ರಹ

ಬಂಟ್ವಾಳ: ಪ್ರಾಕೃತಿಕ ವಿಕೋಪದಡಿ ಹಾನಿಯಾಗಿ ನಷ್ಟ ಸಂಭವಿಸಿದವರಿಗೆ ಸೂಕ್ತ ಪರಿಹಾರ ನೀಡುವಂತೆ ಮಂಗಳವಾರ ಬಂಟ್ವಾಳ ತಾಲೂಕು ಪಂಚಾಯತ್ ನಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
ಈ ಬಗ್ಗೆ ತಾಪಂ ಸದಸ್ಯರೋರ್ವರು ಪ್ರಸ್ತಾಪಿಸಿ, ತನ್ನ ಕಾರ್ಯ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಅಡಿಕೆ, ತೆಂಗಿನ ಮರ ಸಹಿತ ಹಟ್ಟಿಯ ಮೇಲ್ಛಾವಣಿಗೆ ಹಾನಿಯಾಗಿ ನಷ್ಟ ಸಂಭವಿಸಿತ್ತು. ಇದಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಭೇಟಿ ನೀಡಿ, ನಷ್ಟ ಅಂದಾಜು ಪಟ್ಟಿ ಮಾಡಿದ್ದರು. ಆದರೆ ಕೇವಲ 800 ರೂ. ಪ್ರಾಕೃತಿಕ ವಿಕೋಪ ಪರಿಹಾರದ ಚೆಕ್ ಬಂದಿದೆ‌. ಇದು ಅವರಿಗೆ ಮಾಡಿದ ಅವಮಾನ ಎಂದು ಸಭೆಯ ಗಮನ ಸೆಳೆದರು.
ಇದಕ್ಕೆ ಧ್ವನಿಗೂಡಿಸಿದ ಜಿ.ಪಂ.ಸದಸ್ಯರುಗಳು ಫಲಾನುಭವಿಗಳು ತಮ್ಮ ಪರಿಹಾರಕ್ಕಾಗಿ ಅಲೆದಾಡಿ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಕಾಗದ ವೆಚ್ಚಗಳಿಗೆ ಖರ್ಚು ಮಾಡುತ್ತಾರೆ. ಇದು ಅವರಿಗೆ ಅವಮಾನ, ಇಂತಹ ಮೊತ್ತವನ್ನು ನೀಡುವ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಕೂಡಲೇ ಚೆಕ್ ಅನ್ನು ಹಿಂದಿರುಗಿಸುವಂತೆ ಒತ್ತಾಯಿಸಿದರು.

ಕಂದಾಯ ಅದಾಲತ್ ನಲ್ಲಿ ಸಮಸ್ಯೆ ಪರಿಹಾರಕ್ಕಿಂತ ತೊಂದರೆಗಳೇ ಆಗುತ್ತಿವೆ. ಕಾಟಾಚಾರಕ್ಕೆ ಕಂದಾಯ ಅದಾಲತ್ ಮಾಡುವುದು ಬೇಡ ಎಂದು ಸಭೆಗೆ ತಿಳಿಸಿದಾಗ, ಇದಕ್ಕೆ ಧ್ವನಿಗೂಡಿಸಿದ ಸದಸ್ಯರು ಇರಾದಲ್ಲಿ ನಡೆದ ಅದಾಲತ್ ನಲ್ಲಿ ಗ್ರಾಮಕಾರಣಿಕರೇ ಗೈರು ಹಾಜರಿದ್ದರು. ಹಾಗಾದರೆ ಅದಾಲತ್ ಯಾಕಾಗಿ ಎಂದು ಪ್ರಶ್ನಿಸಿದರು. ‌

ಪ್ರಕೃತಿ ವಿಕೋಪದಡಿಯಲ್ಲಿ ಆಗಿರುವ ಅನೇಕ ಘಟನೆಗಳಿಗೆ ಕಂದಾಯ ಇಲಾಖೆ ಸೂಕ್ತವಾದ ಪರಿಹಾರ ನೀಡದೆ ಇರುವುದು ಯಾಕೆ ಎಂದು ಸದಸ್ಯರು ಪ್ರಶ್ನಿಸಿದರು.

ಪ್ರದಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸಾಧ್ಯವಾದಷ್ಟು ಅರ್ಜಿಗಳು ಬರುವಂತೆ ಜನಪ್ರತಿನಿಧಿಗಳು ಮುತುವರ್ಜಿವಹಿಸಿ.
ಈ ತಾಲೂಕಿನಲ್ಲಿ ಒಟ್ಟು 54 ಸಾವಿರ ಕೃಷಿಕ ರಲ್ಲಿ 13 ಸಾವಿರ ಕೃಷಿಕರು ನೊಂದಾವಣೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಹೆರಿಗೆ ರಜೆಗೆಂದು ಸರಕಾರಿ ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯನ್ನು ಸಮಾಜ ಕಲ್ಯಾಣ ಇಲಾಖೆ ಹೆರಿಗೆ ರಜೆ ಮುಗಿಸಿ ಕೆಲಸಕ್ಕೆ ಹಾಜರಾದ ಸಂದರ್ಭದಲ್ಲಿ ಕೆಲಸದಿಂದ ಕೈಬಿಡಲಾಗಿರುವುದು ಕಾನೂನಿಡಿಯಲ್ಲಿ ಅಪರಾದ ಎಂದು ಜಿ.ಪಂ.ಸದಸ್ಯೆ ಅಧಿಕಾರಿಗಳ ಗಮನಕ್ಕೆ ತಂದದ್ದಲ್ಲದೆ , ಆ ಮಹಿಳೆಗೆ ನ್ಯಾಯ ಒದಗಿಸಲು ಒತ್ತಾಯಿಸಿದರು.
ಆರು ತಿಂಗಳ ಆ ಮಹಿಳೆಯ ಸಂಬಳ ಯಾರಿಗೆ ನೀಡಿದ್ದಾರೆ ಎಂಬುದು ಕೂಡಾ ತನಿಖೆಯಾಗಬೇಕಾಗಿದೆ. ಇಂತಹ ಘಟನೆಗಳು ಇನ್ನು ಮುಂದೆ ತಾಲೂಕಿನ ಯಾವುದೇ ಕಚೇರಿಯಲ್ಲಿ ಮುಂದೆ ನಡೆಯಬಾರದು.
ನ್ಯಾಯ ಲಯದ ಆದೇಶ ಕೂಡ ಇದೆ ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಆರಂಭದಲ್ಲಿ ಇಲಾಖೆಗಳ ಚರ್ಚೆ ಆರಂಭವಾದಾಗ ಕಾರ್ಯಸೂಚಿಯಂತೆ ಸಭೆ ನಡೆಸಿ ಚರ್ಚೆ ಮಾಡುವುದಿದ್ದರೆ ಬಳಿಕ ಮಾಡಿ ಎಂದು ತಾ.ಪಂ.ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಅಧ್ಯಕ್ಷ ರ ಗಮನಕ್ಕೆ ತಂದರು.

ಸಾರ್ವಜನಿಕ ಉದ್ದೇಶಕ್ಕಾಗಿ ಇರುವ ಅರ್ಜಿಗಳು ಸರಿಯಾದ ಸಮಯದಲ್ಲಿ ಇಲಾಖೆಯಿಂದ ವಿಲೇವಾರಿಯಾಗಬೇಕು ಎಂದು ಸದಸ್ಯರು ತಹಶಿಲ್ದಾರರಿಗೆ ತಿಳಿಸಿದರು.

ಸತ್ತಿಕಲ್ಲು ಸರಕಾರಿ ಶಾಲಾ ಜಮೀನು ಹೆದ್ದಾರಿ ಗೆ ರಸ್ತೆ ಅಗಲಿ ಕರಣ ದ ಉದ್ದೇಶದಿಂದ ಬಿಟ್ಟುಕೊಡಲಿದೆ. ಆದರೆ ಈವರಗೆ ಅದಕ್ಕೆ ಸೂಕ್ತವಾದ ಜಾಗ ನೀಡುವ ಮನಸ್ಸು ಕಂದಾಯ ಇಲಾಖೆ ಮಾಡಿದೆ, ಕಳೆದ ಒಂದು ವರ್ಷದಿಂದ ಕಚೇರಿ ಕಚೇರಿ ಅಳೆದಾಡುವ ಸ್ಥಿತಿ ನಿರ್ಮಾಣ ವಾಗಿದೆ ಎಂದು ಸದಸ್ಯರು ತಹಶಿಲ್ದಾರ ರಶ್ಮಿ ಅವರ ಗಮನಕ್ಕೆ ತಂದರು.

ಬೀಳುವ ಸ್ಥಿತಿಯಲ್ಲಿರುವ ಅನೇಕ ಶಾಲಾ ಕಟ್ಟಡಗಳಿದ್ದು ಅಂತಹ ಶಾಲಾ ಕಟ್ಟಡ ಗಳನ್ನು ಶೀಘ್ರವಾಗಿ ಕೆಡವದಿದ್ದರೆ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಸದಸ್ಯರು ಸಭೆಯಲ್ಲಿ ಬಿ.ಇ.ಒ.ಗಮನಕ್ಕೆ ತಂದರು.

ತಾಲೂಕಿನ‌ ಏಕಪದ್ಯೋಯ ಇರುವ ಶಾಲೆಗಳನ್ನು ಗುರುತಿಸಿ ಅಂತಹ ಶಾಲೆಗಳಿಗೆ ಶಿಕ್ಷಕನ ನೇಮಕ ಮಾಡುವ ಕೆಲಸ ಗಂಭೀರ ವಾಗಿ ಪರಿಗಣಿಸಿ ಬಿ.ಒ.ಮಾಡಬೇಕಾಗಿದೆ ಎಂದು ಜಿ.ಪಂ.ಸದಸ್ಯರು ಸಭೆಯಲ್ಲಿ ತಿಳಿಸಿದರು.

ನಂದಾವರ ಶಾಲಾ ಅವರಣಗೋಡೆ ಮುರಿದು ಹೋಗಿದ್ದು ಇದನ್ನು ಸರಿಪಡಿಸಿ ಕೊಡುವಂತೆ ಸಭೆಯಲ್ಲಿ ತಾ.ಪಂ.ಸದಸ್ಯರು ತಿಳಿಸಿದರು.
ಸಭೆಯಲ್ಲಿ 9 ಜಿ.ಪಂ.ಸದಸ್ಯ ರಿಗೆ ಕುಳಿತುಕೊಳ್ಳಲು ಆಸನ ದ ವ್ಯವಸ್ಥೆ ಇಲ್ಲ ದ ಬಗ್ಗೆ ಅಧ್ಯಕ್ಷ ರು ಹಾಗೂ ಇ.ಒ.ಅವರು ಗಮನಿಸಿ ಮುಂದಿನ ಸಭೆಯಲ್ಲಿ ಅದರೂ ವ್ಯವಸ್ಥೆ ಮಾಡುವಂತೆಯೂ ಜಿ.ಪಂ.ಸದಸ್ಯ ರೋರ್ವರು ತಿಳಿಸಿದರು.
ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ ಹಾಗೂ .ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು

More from the blog

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...