ಬಂಟ್ವಾಳ : ಸಮಾಜದಲ್ಲಿ ತಾಯಿ, ಪತ್ನಿ, ಪುತ್ರಿ , ಸೊಸೆ ಹೀಗೆ ವಿವಿಧ ರೂಪಗಳಲ್ಲಿರುವ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ವಕೀಲರಾದ ಆಶಾಮಣಿ ರೈ ಹೇಳಿದರು. ಅವರು ರೋಟರಿ ಸಭಾಂಗಣ ಬಿ.ಸಿ.ರೋಡು ಇಲ್ಲಿ ನಡೆದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ, ಶೋಷಣೆ ಹೆಚ್ಚುತ್ತಿದೆ . ಈ ಬಗ್ಗೆ ರೋಟರಿಯಂತಹ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ಮಾಡಬೇಕು ಎಂದು ಹೇಳಿದರು. ಸಮಾರಂಭದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ರಾದ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ ಉಪಸ್ತಿತರಿದ್ದರು.