Monday, February 10, 2025

ಡ್ರಜ್ಜಿಂಗ್ ಮೆಷಿನ್ ಬಳಸಿ‌ ಹೂಳು ತೆಗೆಸಿದ ಫಲವಾಗಿ ನೀರು ಹರಿಯುತ್ತಿರುವ ದೃಶ್ಯ

 

ಬಂಟ್ವಾಳ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ಕೈಗೊಂಡ ಮಹತ್ವದ ಕಾರ್ಯ ಫಲ ನೀಡಿದೆ.
ಡ್ರಜ್ಜಿಂಗ್ ಮೆಷಿನ್ ಮೂಲಕ ಎಂ.ಆರ್.ಪಿ.ಎಲ್.ನ ಹೂಳು ತೆಗೆದಾಗ ನೀರು ಹೊರಗೆ ಹರಿಯಿತು.

ಕುಡಿಯುವ ನೀರಿನ ಸಮಸ್ಯೆ ಉಂಟಾದ ವೇಳೆ ಎಂ.ಆರ್.ಪಿ.ಎಲ್ ಡ್ಯಾಂ ನಲ್ಲಿ ನೀರು ಸ್ಟಾಕ್ ಇದೆ ಆದರೆ ಅ ನೀರು ಕೆಳಗೆ ಹೋಗಲು ವ್ಯವಸ್ಥೆ ಇಲ್ಲದೆ ಉಪಯೋಗ ಕ್ಕೆ ಸಿಗುತ್ತಿಲ್ಲ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ ಶಾಸಕ ರಾಜೇಶ್ ನಾಯಕ್ ಅವರು ಎಂ.ಆರ್.ಪಿ.ಎಲ್.ಡ್ಯಾಂ ನ ಲ್ಲಿ ಹೂಳು ತುಂಬಿದ್ದು ನೀರಿನ ಹರಿಗೆ ತೊಂದರೆ ಯಾಗಿದೆ ಎಂದು ಮನಗಂಡರು.
ಕೂಡಲೇ ಸ್ಥಳಕ್ಕೆ ಡ್ರಜ್ಜಿಂಗ್ ಮೆಷಿನ್ ಕರೆಯಿಸಿ ಹೂಳು ತೆಗೆಸಿದರು.


ಎಂ.ಅರ್.ಪಿ.ಎಲ್.ನಿಂದ ನೀರು ಕೆಳಗೆ ಹರಿದರೆ ಹಿಂದಿನ ಕಾಲದ ಬೋಟ್ ವೇ ಮೂಲಕ ನೇರವಾಗಿ ತುಂಬೆವರೆಗೆ ನೀರು ಬರುವ ಲೆಕ್ಕಾಚಾರ ಇವರದು.
ಬೋಟ್ ವೇ ಯಲ್ಲಿ ಕೆಲವೊಂದು ಕಡೆಗಳಲ್ಲಿ ಮರಳು ಹಾಗೂ ಬಂಡೆ ಕಲ್ಲುಗಳು ಅಡ್ಡವಾಗಿವೆ ಅದನ್ನು ತೆರವುಗೊಳಿಸುವಂತೆಯೂ ಸೂಚನೆ ನೀಡಿದ್ದರು.

ಡ್ರೆಜ್ಜಿಂಗ್ ಮೂಲಕ ಮರಳು ತೆರವು ಮಾಡಿದ ಬಳಿಕ ಎಂ ಆರ್ ಪಿ ಎಲ್ ಡ್ಯಾಂ ನಿಂದ ನೀರು ಕೆಳಗೆ ಇಂದು ಹರಿಯುತು.
ನದಿಯಲ್ಲಿ ಹೂಳು ತುಂಬಿದೆ ಎಂಬ ಹಲವಾರು ಜನರ ಮಾತಿಗೆ ಇನ್ನಾದರೂ ಮುಕ್ತಿ ಸಿಗಬಹುದೇ?

More from the blog

ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ನಲ್ಲೂ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ...

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು...

ಕೊಳ್ನಾಡು : ಬಾರೆಬೆಟ್ಟು ಮಂಟಮೆಯಲ್ಲಿ ಕಾಲಾವಧಿ ಜಾತ್ರೆ

ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ 'ಬಾರೆಬೆಟ್ಟು ಮಂಟಮೆ'ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು. ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ...

ಪಣೋಲಿಬೈಲು ಕ್ಷೇತ್ರದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ & ಕೋಲ ಸೇವೆ ಇಲ್ಲ

ಬಂಟ್ವಾಳ: ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ ಮತ್ತು ಕೋಲ ಸೇವೆ” ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ನಂದಾವರ ಶ್ರೀ ವಿನಾಯಕ ಶಂಕರ...