Wednesday, January 28, 2026

ಜು. 8ರಂದು ಬಂಟ್ವಾಳ ರೋಟರಿ ಕ್ಲಬ್‌ನ 2023-24ನೇ ಸಾಲಿನ ನೂತನ ಅಧ್ಯಕ್ಷ ಬಿ.ಪ್ರಕಾಶ್ ಬಾಳಿಗಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ರೋಟರಿ ಜಿಲ್ಲೆ 3181ರ 54 ವರ್ಷಗಳ ಹಿರಿಯ ಕ್ಲಬ್ ಎನಿಸಿಕೊಂಡಿರುವ ಬಂಟ್ವಾಳ ರೋಟರಿ ಕ್ಲಬ್‌ನ 2023-24ನೇ ಸಾಲಿನ ನೂತನ ಅಧ್ಯಕ್ಷ ಬಿ.ಪ್ರಕಾಶ್ ಬಾಳಿಗಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 8ರಂದು ಸಂಜೆ 6.30ಕ್ಕೆ ಬಿ.ಸಿ.ರೋಡಿನ ರೋಟರಿ ಬಿ.ಎ.ಸೋಮಯಾಜಿ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಬಿ.ಪ್ರಕಾಶ್ ಬಾಳಿಗಾ ಹೇಳಿದ್ದಾರೆ.

ಅವರು ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ಅವರ ಆಶಯದಂತೆ ಸೇವಾ ಕಾರ್ಯವಾದ ಅಂಗನವಾಡಿಗಳ ಉನ್ನತೀಕರಣದ ಜತೆಗೆ ಮಾನಸಿಕ ಆರೋಗ್ಯ ಶಿಬಿರ, ಮಳೆ ನೀರು ಮರುಪೂರಣ ಮೊದಲಾದ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದೇವೆ.

ಗಣ್ಯರ ಸಮ್ಮುಖದಲ್ಲಿ ಪೂರ್ವ ಜಿಲ್ಲಾ ಗವರ್ನರ್ ಕೆ.ಕೃಷ್ಣ ಶೆಟ್ಟಿ ಅವರು ಪದಗ್ರಹಣ ನೆರವೇರಿಸಲಿದ್ದಾರೆ. ಈ ಸಾಲಿನ ಕ್ಲಬ್ ಕಾರ್ಯದರ್ಶಿಯಾಗಿ ಬಿ.ಸದಾಶಿವ ಬಾಳಿಗಾ, ಉಪಾಧ್ಯಕ್ಷ ಬಸ್ತಿ ಮಾಧವ ಶೆಣೈ, ಖಜಾಂಚಿ ಸಂದೀಪ್ ಮೆನೇಜಸ್, ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ, ನಿರ್ದೇಶಕರಾಗಿ ಕ್ಲಬ್ ಸೇವೆಗೆ ಬೇಬಿ ಕುಂದರ್, ವೃತ್ತಿ ಸೇವೆ ಎಸ್.ಶಾಂತರಾಜ್, ಸಮಾಜ ಸೇವೆ ಶಾಂತಿ ಪ್ರಕಾಶ್ ಡಿಸೋಜ, ಯುವಜನ ಸೇವೆ ರಾಜೇಶ್ ಸುವರ್ಣ, ಅಂತಾರಾಷ್ಟಿçÃಯ ಸೇವೆ ಮುರಳೀಧರ ಪ್ರಭು, ಕ್ಲಬ್ ತರಬೇತುದಾರ ಕೆ.ನಾರಾಯಣ ಹೆಗ್ಡೆ, ಧಂಡಾಧಿಕಾರಿ ವಸಂತ ಪ್ರಭು, ಜತೆ ಕಾರ್ಯದರ್ಶಿ ಶ್ರೀವಿದ್ಯಾ ರೈ, ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ರಿತೇಶ್ ಬಾಳಿಗಾ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಪದಾಽಕಾರಿಗಳಾದ ಬಿ.ಸದಾಶಿವ ಬಾಳಿಗಾ, ಬಸ್ತಿ ಮಾಧವ ಶೆಣೈ, ಕೆ.ನಾರಾಯಣ ಹೆಗ್ಡೆ, ಬಿ.ರಿತೇಶ್ ಬಾಳಿಗಾ, ಎಸ್.ಶಾಂತರಾಜ್ ಉಪಸ್ಥಿತರಿದ್ದರು

More from the blog

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...

Bantwal : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ – ಪದಾಧಿಕಾರಿಗಳ ಪದಾಪ್ರಧಾನ, ರಜತ ಸಂಭ್ರಮ ಸಮಾರೋಪ

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ...

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...