Thursday, July 10, 2025

ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ವಂಚನೆ: ದೂರು ದಾಖಲು

ಬಂಟ್ವಾಳ: ಕ್ರಿಪ್ಟೋ ಕರೇನ್ಸಿಯ ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಸಾವಿರಾರು ರೂ. ವಂಚನೆ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇಶವ ಮೂರ್ತಿ ಸಿ. ಎಂಬವರು ಕ್ರಿಪ್ಟೋ ಕರೇನ್ಸಿಯಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭಾಂಶ ಕೊಡುತ್ತೇನೆ ಎಂದು ನಂಬಿಸಿ, ತನ್ನಿಂದ 60 ಸಾವಿರ ರೂ.ವನ್ನು ಪಡೆದಿದ್ದಾರೆ. ಬಳಿಕ ಕ್ರಿಪ್ಟೋ ಕರೆನ್ಸಿಯನ್ನು ನೀಡದೆ, ಹಣವನ್ನು ವಾಪಸ್ ನೀಡದೇ ವಂಚನೆ ಮಾಡಿದ್ದಾರೆ ಎಂದು
ಶಿವಗುರುದತ್ತ ಎಂಬವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

More from the blog

ಬಂಟ್ವಾಳದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಮತ್ತು ಅರಿವು ಕಾರ್ಯಕ್ರಮ.. 

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಬಂಟ್ವಾಳ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಬಂಟ್ವಾಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ...

ಗುರುಪೂರ್ಣಿಮಾ ಪ್ರಯುಕ್ತ ಮುಖ್ಯೋಪಾಧ್ಯಾಯ ಗೋಪಾಲ್ ಅವರಿಗೆ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಆಮ್ಟೂರು ಇವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಣವನ್ನು ಮಾಡಲು ಪ್ರೇರಣೆ ಕೊಟ್ಟಂತಹ ಗುರುಗಳಾದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ...

ಗುರುಪೂರ್ಣಿಮಾ ಪ್ರಯುಕ್ತ ಪ್ರಸೂತಿ ತಜ್ಞೆ ವೆಂಕಮ್ಮರಿಗೆ ಬಿಜೆಪಿ ವತಿಯಿಂದ ಗೌರವರ್ಪಣೆ..

ಬಂಟ್ವಾಳ : ತಾಲೂಕಿನ ಕೊಡಂಬೆಟ್ಟು ಪರಿಸರದಲ್ಲಿ ನೂರಾರು ಮಂದಿಗಳ ಬಾಳಿನಲ್ಲಿ ಬೆಳಕು ಪ್ರಜ್ವಲಿಸಿದ ಪ್ರಸೂತಿ ತಜ್ಞೆ ವೆಂಕಮ್ಮ ಎಂಬವರಿಗೆ ಗುರು ಪೂರ್ಣಿಮಾ ದಿನಾಚರಣೆಯ ಪ್ರಯುಕ್ತ. ಬಿಜೆಪಿ ವತಿಯಿಂದ ಪಕ್ಷದ ನಾಯಕಿ ಸುಲೋಚನ ಜಿ....

ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ, ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಸಾಮೂಹಿಕ ವಿವಾಹ..

ಬಂಟ್ವಾಳ : ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ (ಅಬುದಾಬಿ), ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಜುಲೈ 13 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ...