ಬಂಟ್ವಾಳ: ತಾಲೂಕು ಪಂಚಾಯತ್ ವತಿಯಿಂದ ತಾಲೂಕು ವ್ಯಾಪ್ತಿಯ ಗ್ರಾ.ಪಂ.ಮಟ್ಟದ ಸಂಜೀವಿನಿ ಒಕ್ಕೂಟ ಗಳ ಸ್ವ ಉದ್ಯೋಗ ತರಬೇತಿ ಹಾಗೂ ಮಾಹಿತಿ ಕಾರ್ಯಗಾರ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣ ದಲ್ಲಿ ಶುಕ್ರವಾರ ವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ರಾಜಣ್ಣ , ಮಹಿಳೆಯರು ಸ್ವ-ಉದ್ಯೋಗದ ಮೂಲಕ ಸಮಾಜದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಯಿತು.
ಸರಕಾರ ಬೇರೆಬೇರೆ ಕಾರ್ಯಕ್ರಮ ಗಳ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಯೋಜನೆ ಗಳನ್ನು ಹಾಕಿಕೊಂಡಿದೆ.
ಮಹಿಳೆಯರು ಇದರ ಪ್ರಯೋಜನ ಪಡೆಯಲು ಹೇಳಿದರು.

ಬಂಟ್ವಾಳ ತಾಲೂಕಿನ 58 ಗ್ರಾ.ಪಂ.ಗಳ ಪೈಕಿ 40 ಗ್ರಾ.ಪಂ.ಗಳಲ್ಲಿ NRLM ಸಂಜೀವಿನಿ ಯೋಜನೆ ಯಡಿ ಗ್ರಾ.ಪಂ.ಮಟ್ಟದ ಒಕ್ಕೂಟ ರಚನೆಯಾಗಿದ್ದು ಸ್ವಸಹಾಯ ಗುಂಪುಗಳಲ್ಲಿ ಜೀವನೋಪಾಯ ಚಟುವಟಿಕೆ ನಡೆಸಿ ಆರ್ಥಿಕ ವಾಗಿ ಸಬಲೀಕರಣಗೊಳಿಸಲು ಸ್ವಸಹಾಯ ಸಂಘ ದ ಸದಸ್ಯ ರಿಗೆ ಈ ಬಗ್ಗೆ ಅರಿವು ಮೂಡಿಸಿ ಸ್ವ ಉದ್ಯೋಗ ದ ಮೂಲಕ ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸತೀಶ್ ಮಾಬೆನ್ ಮಂಗಳೂರು, ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರ ದ ಅಧಿಕಾರಿ ಪಾಂಡುರಂಗ ಕೆ. ಎನ್.ಆರ್.ಎಲ್.ಎಮ್.ನ ಜಿಲ್ಲಾ ಕಾರ್ಯ ಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಸಿಡಾಕ್ ಮಂಗಳೂರು ಇದರ ಸಮಾಲೋಚಕಿ ಪ್ರವೀಶ್ಯ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಪ್ರಶಾಂತ್ ಬಳಂಜ ಕಾರ್ಯಕ್ರಮದ ರೂಪುರೇಷೆ ಗಳ ಬಗ್ಗೆ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಕುಶಾಲಪ್ಪ ವಂದಿಸಿದರು.