Monday, January 26, 2026

ಅಗಸ್ಟ್ 31ರಿಂದ ಸೆಪ್ಟಂಬರ್ 3ರವರೆಗೆ ೪೩ನೇ ವರ್ಷದ ಬಿ.ಸಿ.ರೋಡು ಗಣೋಶೋತ್ಸವ

ಬಂಟ್ವಾಳ : ಬಿ.ಸಿ.ರೋಡಿನ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ ೪೩ನೇ ವರ್ಷ ಸಾರ್ವಜನಿಕ ಶ್ರೀ ಗಣೇಶೋತ್ಸವವು ಅಗಸ್ಟ್ 31ರಿಂದ ಸೆಪ್ಟಂಬರ್ 3ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಕ್ತೇಶ್ವರಿ ದೇವಿ ಸನ್ನಿಧಿಯ ವಠಾರದ ಸಭಾ ಮಂಟಪದಲ್ಲಿ ನಡೆಯಲಿರುವುದು.

ಅಗಸ್ಟ್ ೩೧ರಂದು ಬೆಳಿಗ್ಗೆ ಬಂಟ್ವಾಳದಿಂದ ಮೂರ್ತಿ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪನಾ ಗಣಹೋಮ ನಡೆಯಲಿರುವುದು. ಸಂಜೆ ೪ರಿಂದ ೬ರ ವರೆಗೆ ಶ್ರೀ ರಾಮ ಭಜನಾ ಮಂದಿರ ಬಂಟ್ವಾಳ ಇವರಿಂದ ಭಜನೆ ನಡೆಯಲಿರುವುದು. ಸಂಜೆ ೬ರಿಂದ ಕಲ್ಲಡ್ಕ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್‌ನ ವಿದುಷಿ ವಿದ್ಯಾ ಮನೋಜ್ ಇವರ ಶಿಷ್ಯೆಯರಿಂದ ನೃತ್ಯ ಸಿಂಚನ ಭರತನಾಟ್ಯ ನಡೆಯಲಿರುವುದು. ಸೆಪ್ಟಂಬರ್ 1ರಂದು ಸಂಜೆ ೪ರಿಂದ ಸತ್ಯಸಾಯಿ ಸೇವಾ ಕೇಂದ್ರ ಜೋಡುಮಾರ್ಗ ಇವರಿಂದ ಭಜನೆ ನಡೆಯಲಿರುವುದು. ಸಂಜೆ ೬ರಿಂದ ಸುಮನಸ ಯಕ್ಷ ಬಳಗ ಬಂಟ್ವಾಳ ಇವರ ಸದಸ್ಯರಿಂದ ಯೋಗೀಶ್ ಶರ್ಮ ಅಳದಂಗಡಿ ಮಾರ್ಗದರ್ಶನದಲ್ಲಿ ಯಕ್ಷ ಗಾನ ವೈಭವ ಮತ್ತು ಗಣೇಶೋದ್ಭವ ಯಕ್ಷಗಾನ ಬಯಲಾಟ ನಡೆಯಲಿರುವುದು. ಸೆಪ್ಟಂಬರ್ 2ರಂದು ಕೂಟ ಮಹಾಜಗತ್ತು ಸಾಲಿಗ್ರಾಮ ಬಂಟ್ವಾಳ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಸಂಜೆ ೬.೦೦ರಿಂದ ಚಾಪರ್ಕ ತಂಡ ದೇವದಾಸ ಕಾಪಿಕಾಡ್ ನಿರ್ದೇಶನದ ನಮಸ್ಕಾರ ಮಾಸ್ಟ್ರೇ ನಾಟಕ ನಡೆಯಲಿರುವುದು. ಸೆಪ್ಟೆಂಬರ್ 3ರಂದು ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ೩.೩೦ಕ್ಕೆ ಬಿ.ಸಿ.ರೋಡು ಎಸ್. ಎನ್. ಹೊಳ್ಳ ಚಿಲಿಪಿಲಿ ಬಳಗದವರಿಂದ ಗೊಂಬೆ ಕುಣಿತ, ಮಹಾಪೂಜೆ, ರಂಗಪೂಜೆ, ಹಾಗೂ ವಿಸರ್ಜನಾ ಪೂಜೆಯ ಬಳಿಕ ಶೋಭಾಯಾತ್ರೆಯು ಬಿ.ಸಿ.ರೋಡು, ಕೈಕಂಬ, ತಲಪಾಡಿ, ಗಣಪತಿ ಕಟ್ಟೆಯಿಂದ ತಿರುಗಿ, ಮೊಡಂಕಾಪು, ಬಿ.ಸಿ.ರೋಡು, ಮಯ್ಯರಬೈಲು, ಭಂಡಾರಿಬೆಟ್ಟು, ಬಂಟ್ವಾಳ ನೆರೆ ವಿಮೋಚನಾ ರಸ್ತೆಯಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ನದಿಯಲ್ಲಿ ವಿಸರ್ಜನೆಯಾಗುವುದು ಎಂದು ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಎಮ್. ಸತೀಶ್ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...