ಬಂಟ್ವಾಳ: ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂಟ್ವಾಳದ ವಿದ್ಯಾಗಿರಿಯ ಎಸ್ಎಸ್ವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಪಮಾ ಕಾಮತ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕನ್ನಡ 125,
ಗಣಿತ 100,
ಸಮಾಜ100,
ಸಂಸ್ಕೃತ 100,
ಇಂಗ್ಲಿಷ್ 100,
ವಿಜ್ಞಾನದಲ್ಲಿ 99 ಅಂಕ ಗಳಿಸುವ ಮೂಲಕ ಒಟ್ಟು 625 ರಲ್ಲಿ 624ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈಕೆ ಬಿ.ಸಿ.ರೋಡಿನ ವೈದ್ಯ ದಂಪತಿ ಡಾ. ಅನುರಾದ ಕಾಮತ್ ಹಾಗೂ ಡಾ.ದಿನೇಶ್ ಕಾಮತ್ ಅವರ ಪುತ್ರಿ. ಇವರ ಸಾಧನೆಗೆ ಶಾಲೆ ಅಬಿನಂಧಿಸಿದೆ.
