ಬಂಟ್ವಾಳ : ಶಿಕ್ಷಣ, ಸಂಸ್ಕೃತಿ , ಹೃದಯ ಶ್ರೀಮಂತಿಕೆಯಲ್ಲಿ ಜೈನರನ್ನು ಮೀರಿಸುವವರಿಲ್ಲ, ಇದುವೇ ನಮ್ಮ ಸಮುದಾಯದ ಮುನ್ನಡೆಗೆ ಪ್ರೇರಣೆಯಾಗಬೇಕಿದೆ ಎಂದು ಕಾರ್ಕಳದ ವಕೀಲರಾದ ಎಂ.ಕೆ.ವಿಜಯ ಕುಮಾರ್ ಹೇಳಿದರು.

ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಭಾನುವಾರ ನಡೆದ ಬಂಟ್ವಾಳ ಜೈನ್ ಮಿಲನ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜೈನ ಸಮಾಜ ನಶಿಸಿ ಹೋಗುತ್ತಿದೆ ಎಂಬ ಮಾತುಗಳು ಕೇಳುತ್ತಿದೆ, ಇದು ಸುಳ್ಳು, ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಜೈನಸಮುದಾಯದ ಸಂಖ್ಯೆ ಹೆಚ್ಚಾಗುತ್ತಿದೆ, ಜೈನ್ ಮಿಲನ್ ಮೂಲಕ ನಮ್ಮ ಶಕ್ತಿಯನ್ನು ನಾವು ಅರಿತುಕೊಂಡು ಕ್ರಿಯಾಶೀಲರಾಗಿ ಮುನ್ನಡೆಯುವ ಎಂದವರು ಹೇಳಿದರು.
ಭಾರತೀಯ ಜೈನ್ ಮಿಲನ್ ನ ವಲಯ 8ರ ಉಪಾಧ್ಯಕ್ಷ ಸುದರ್ಶನ್ ಜೈನ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಮಾತನಾಡಿ, ಜೈನಸಮುದಾಯದ ಜನಸಂಖ್ಯೆ ಕಡಿಮೆಯಾಗಿದ್ದರೂ, ನಿರ್ದಿಷ್ಟ ಕಾರ್ಯಕ್ರಮಗಳ ಮೂಲಕ ಸಮುದಾಯಕ್ಕೆ ಮತ್ತಷ್ಟು ಹುರುಪು ತುಂಬುವ ಕಾರ್ಯ ಜೈನ್ ಮಿಲನ್ ನ ಚಟುವಟಿಕೆಗಳ ಮೂಲಕ ಆಗಬೇಕಿದೆ ಎಂದರು.
ಬಂಟ್ವಾಳ ಜೈನ್ ಮಿಲನ್ ನ ನೂತನ ಅಧ್ಯಕ್ಷ ಡಾ.ಸುದೀಪ್ ಕುಮಾರ್ ನೂತನ ಕಾರ್ಯದರ್ಶಿ ಸನ್ಮತಿ ಜಯಕೀರ್ತಿ ಜೈನ್, ನೂತನ ಕೋಶಾಧಿಕಾರಿ ಅಜಿತ್ ಕುಮಾರ್ ಜೈನ್ ಮತ್ತು ಬಳಗ ಅಧಿಕಾರ ವಹಿಸಿಕೊಂಡಿತು.
ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ನಿರ್ದೇಶಕ ಧನ್ಯಕುಮಾರ್ ರೈ, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ವೀರ್ ಬ್ರಿಜೇಶ್ ಜೈನ್, ಕಾರ್ಯದರ್ಶಿ ಗೀತಾ ಜಿನಚಂದ್ರ, ವೇದಿಕೆಯಲ್ಲಿದ್ದರು.
ಜೈನ್ ಮಿಲನ್ ನ ವಿವಿಧ ವಿಭಾಗಗಳ ನಿರ್ದೇಶಕರಾದ ರಾಜವರ್ಮ ಆರಿಗ, ಮಹಾವೀರ ಅಂಡಾರು, ಧೀರಜ್ ಕುಮಾರ್, ಪ್ರಮೋದ್ ಕುಮಾರ್ ರವರನ್ನು ಬಂಟ್ವಾಳ ಜೈನ್ ಮಿಲನ್ ವತಿಯಿಂದ ಗೌರವಿಸಲಾಯಿತು.
ವಂದನಾ ಆರ್ ಚೌಟ ಸ್ಬಾಗತಿಸಿದರು. ನೂತನ ಕಾರ್ಯದರ್ಶಿ ಸನ್ಮತಿ ಜಯಕೀರ್ತಿ ವಂದಿಸಿದರು. ಭರತ್ ಕುಮಾರ್ ಸಿದ್ಧಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.