Monday, January 26, 2026

Bantwal: ಅಪ್ರಾಪ್ತ ಬಾಲಕ ನೇಣಿಗೆ ಶರಣು:ಕಾರಣ ನಿಗೂಡ

ಬಂಟ್ವಾಳ: ಅಪ್ರಾಪ್ತ ಬಾಲಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ಜುಲೈ 7 ರಂದು ಸಂಜೆ ವೇಳೆ ನಡೆದಿದೆ.
ತುಂಬೆ ಪರ್ಲಕ್ಕೆ ನಿವಾಸಿ ಕರುಣಾಕರ ಗಟ್ಟಿ ಅವರ ಏಕೈಕ ಪುತ್ರ ತೇಜಸ್ ಆತ್ಮಹತ್ಯೆ ಮಾಡಿಕೊಂಡ ಬಾಲಕನಾಗಿದ್ದಾನೆ.
ತೇಜಸ್ ಮೊಡಂಕಾಪು ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇವತ್ತು ಆತನಿಗೆ ಪರೀಕ್ಷೆ ಇದ್ದು, ಸಂಜೆ ವೇಳೆ ಕ್ಲಾಸಿನಿಂದ ಮನೆಗೆ ಬಂದಿದ್ದಾನೆ.
ತಂದೆ ತಾಯಿ ಇಬ್ಬರು ‌ಖಾಸಗಿ ಕೆಲಸದಲ್ಲಿರುವ ಕಾರಣ ಅವರು ಮನೆಗೆ ಬರುವಾಗ ರಾತ್ರಿಯಾಗುತ್ತದೆ.
ಮಗ ಎಂದಿನಂತೆ ಸಂಜೆ ಮನೆಗೆ ಬಂದು ಮನೆಯಲ್ಲಿ ಇರುತ್ತಾನೆ. ಅದೇ ರೀತಿ ತಂದೆ ಮನೆಗೆ ಬಂದಾಗ ಬಾಗಿಲು ಹಾಕಿದ್ದು,ಕಂಡು ಮನೆಯೊಳಗೆ ನೋಡಿದಾಗ ಕೋಣೆಯಲ್ಲಿ ಈತ ನೇಣು ಬಿಗಿದು ನೇತಾಡುವುದು ಕಂಡು ಬಂದಿದೆ.
ಕೂಡಲೇ ಆಸ್ಪತ್ರೆಗೆ ತರಲಾಗಿದೆಯಾದರೂ ಆತ ಮೃತಪಟ್ಟಿರುವುದಾಗಿ ವೈದ್ಯರು‌ ಪರೀಕ್ಷಿಸಿ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ, ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

More from the blog

ಮಾಣಿಯಲ್ಲಿ ಹಿಂದೂ ಸಂಗಮ…

ಬಂಟ್ವಾಳ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಪ್ರಯುಕ್ತ ಮಾಣಿ ಪೆರಾಜೆ ಬರಿಮಾರ್ ನೆಟ್ಲ ಮುಡ್ನೂರು, ಅನಂತಾಡಿ ಗ್ರಾಮಗಳನ್ನು ಒಳಗೊಂಡ ಮಾಣಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ ನೇರಳಕಟ್ಟೆ ಗಣೇಶ ನಗರದಿಂದ ಬೃಹತ್ ಶೋಭಾಯಾತ್ರೆ...

ಜಕ್ರಿಬೆಟ್ಟು : ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 13.5. ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಗೇಟ್ ಹಾಕಿ ನೀರು...

ಅಮ್ಮುoಜೆ : ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ..

ಬಂಟ್ವಾಳ : ಅಮ್ಮುoಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೊತ್ಸವವು ವಿಜೃಂಭಣೆಯಿಂದ ನಡೆಯಿತು. ಜ.25ರಂದು ಭಾನುವಾರ ಬಲಿ ಉತ್ಸವ ನಡೆಯಿತು. ಶ್ರೀಕ್ಷೇತ್ರ ಪೊಳಲಿಯ ಸುಬ್ರಮಣ್ಯ ತಂತ್ರಿಯವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ದೇವಳದ ಅರ್ಚಕ ನರೇಂದ್ರ ಭಟ್,...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...