ಬಂಟ್ವಾಳ: ಹಿರಿಯ ಅನುಭವಿ ದಸ್ತಾವೇಜು ಬರಹಗಾರ, ಧಾರ್ಮಿಕ ಸಾಮಾಜಿಕ ಮುಂದಾಳು ಕೆ.ಪಿ.ಬನ್ನಿಂತಾಯ ವಿಧಿವಶ.
ಬಿಸಿರೋಡ್ ನಿವಾಸಿ ಕೆ.ಪದ್ಮನಾಭ ಬನ್ನಿಂತಾಯ ( 73) ಅವರು ಇಂದು ಸುಮಾರು 7.30 ರ ವೇಳೆ ಹ್ರದಯಘಾತದಿಂದ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.


ಬಂಟ್ವಾಳ ತಾಲೂಕಿನ ಅನಂತಾಡಿ ಕೊಬ್ರಿಮಠ ನಿವಾಸಿ ದಿ! ಗೋಪಾಲ ಕ್ರಷ್ಣ ಬನ್ನಿಂತಾಯ ಅವರ ಪುತ್ರ ಕೆ.ಪದ್ಮನಾಭ ಬನ್ನಿಂತಾಯ ಅವರು ಬಿಸಿರೋಡಿನ ವಕೀಲರಾದ ಕೆ.ಕೇಶವ ಭಟ್ ಅವರ ಜೊತೆ ಗುಮಾಸ್ತ ರಾಗಿ ಕೆಲಸ ಮಾಡಿದ ಬಳಿಕ ಎನ್.ಕೆ.ಕಾಂಪ್ಲೆಕ್ಸ್ ನಲ್ಲಿ ಸ್ವಂತ ದಸ್ತಾವೇಜು ಬರಹಗಾರರಾಗಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಸಾಮಾಜಿಕ ವಾಗಿಯೂ ಗುರುತಿಸಿ ಕೊಂಡ ಇವರು ನೇತ್ರಾವತಿ ಜ್ಯೂನಿಯರ್ ಜೇಸಿಯ ಸ್ಥಾಪಕ ಸದಸ್ಯ ಹಾಗೂ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ ದ ಕೋಶಾಧಿಕಾರಿ ಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ದಸ್ತಾವೇಜು ಬರವಣಿಗೆಯ ಮೂಲಕ ಚಿರಪರಿಚಿತ ರಾಗಿರುವ ಇವರ ಕೆಲಸದ ಪ್ರಾಮಾಣಿಕತೆ ಉತ್ತಮ ನಡವಳಿಕೆ ಇತರರಿಗೆ ಮಾದರಿಯಾಗಿದೆ.
ಇವರು ಒರ್ವ ಪುತ್ರ,ಒರ್ವಳು ಪುತ್ರಿ, ಸೊಸೆ ಹಾಗೂ ಅಳಿಯ , ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.