ಬಂಟ್ವಾಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಠ ರೋಗ ವಿಭಾಗ, ಜಿಲ್ಲಾ ಪಂಚಾಯತ್ ಮಂಗಳೂರು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೈಕಂಬ ಇವರ ವತಿಯಿಂದ ಉಚಿತ ಚರ್ಮ ರೋಗ ತಪಾಸಣಾ ಶಿಬಿರ ಕೈಕಂಬದ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧ್ಯಕ್ಷ ಸದಾಶಿವ ಬಂಗೇರ ಮನುಷ್ಯನ ಉನ್ನತ ಸಾಧನೆಗೆ ಆರೋಗ್ಯ ಬಹಳ ಮುಖ್ಯ. ಅರೋಗ್ಯ ವಂತ ಸಮಾಜದಿಂದ ಮಾತ್ರ ಈ ದೇಶ ಸಂಪತ್ಬರಿತವಾಗುತ್ತದೆ ಎಂದು ಅವರು ಹೇಳಿದರು.
ಆರೋಗ್ಯ ವೇ ಭಾಗ್ಯ ಎಂಬ ನುಡಿಯಂತೆ ಆರೋಗ್ಯ ದ ಉದಾಸೀನ ಮನೋಭಾವ ಬೇಡ, ಉತ್ತಮ ಆರೋಗ್ಯ ಕ್ಕಾಗಿ ಪ್ರತಿಯೊಬ್ಬರು ನುರಿತ ಸರಕಾರಿ ವೈದ್ಯರ ತಪಾಸಣೆ ಮಾಡಿ ಎಂದು ಅವರು ಹೇಳಿದರು.
ಸರಕಾರಿ ಆಸ್ಪತ್ರೆ ಎಂಬ ಕೀಳು ಭಾವನೆ ಬೇಡ. ಸರಕಾರಿ ಹಮ್ಮಿಕೊಂಡ ತಪಾಸಣಾ ಶಿಬಿರ ದ ಪ್ರಯೋಜನ ವನ್ನು ಪ್ರತಿಯೊಬ್ಬರು ಪಡೆದುಕೊಳ್ಳಿ, ವೈದ್ಯರಿಗೆ, ಆಶಾ ಕಾರ್ಯಕರ್ತೆ ಯರಿಗೆ ಗೌರವ ನೀಡಿ ಎಂದರು. ಅನಾರೋಗ್ಯ ದಿಂದ ಎಷ್ಟೋ ಮನೆಗಳು ಇಂದು ಬಡತನದಲ್ಲಿ ಜೀವನ ಸಾಗಿಸುವ ದೃಷ್ಟಾಂತ ಗಳು ಇವೆ. ಹಾಗಾಗಿ ರೋಗ ಬರುವ ಮೊದಲು ಎಚ್ಚರ ವಹಿಸಬೇಕು ಎಂದರು.
ಈ ಕೇಂದ್ರ ವನ್ನು ಬೇರೆ ಕಡೆಗೆ ವರ್ಗಾಯಿಸುವ ಸಂದರ್ಭ ನಮ್ಮ ಮುತುವರ್ಜಿಯಿಂದ ಜನರ ಪ್ರಯೋಜನ ಕ್ಕಾಗಿ ಮತ್ತು ಬೇಡಿಕೆಗೆ ಅನುಗುಣವಾಗಿ ಇಲ್ಲೇ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದೇವೆ.
ವೆನ್ಲಾಕ್ ಆಸ್ಪತ್ರೆಯ ಎಂ.ಡಿ ನವೀನ್, ಡಾ!
ಮಾತನಾಡಿ ಚರ್ಮರೋಗ ದಂತ ಅನೇಕ ರೋಗ ಗಳು ಸ್ವಚ್ಚತೆಯಿಲ್ಲದೆ ಬರುತ್ತಿದೆ, ಹಾಗಾಗಿ ವೈಯಕ್ತಿಕ ಸ್ಚಚ್ಚತೆಗೆ ಹೆಚ್ಚಿನ ಗಮನ ಹರಿಸಿ ಎಂದರು.
ಚರ್ಮ ರೋಗದ ಬಗ್ಗೆ ವಿಶೇಷ ಕಾಳಜಿ ವಹಸಿ ಎಂದರು.
ಬಳಿಕ ಕುಷ್ಟ ರೋಗದ ಬಗ್ಗೆ ಮಾಹಿತಿ ನೀಡಿದ ಅವರು ಯಾವುದೇ ಸಂಶಯಗಳು ಬಂದಾಗ ಸ್ಥಳೀಯ ಸರಕಾರಿ ಆಸ್ಪತ್ರೆ ಯ ವೈದ್ಯಾಧಿಕಾರಿ ಯವರನ್ನು ಸಂದರ್ಶನ ಮಾಡಿ ಎಂದು ಅವರು ಹೇಳಿದರು.
ಕುಷ್ಟರೋಗ ತಜ್ಞ ವಿಜಯ್ ಅವರು ಉಪಸ್ಥಿತರಿದ್ದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ವಾಣಿಶ್ರೀ
ಪ್ರಸ್ತಾವಿಕವಾಗಿ ಮಾತನಾಡಿದರು.
ಆಶಾ ಕಾರ್ಯಕರ್ತೆ ಮೀನಾಕ್ಷಿ ಸ್ವಾಗತಿಸಿ ದರು.
ಆಶಾ ಕಾರ್ಯಕರ್ತೆ ಮಂಜುಳಾ ವಂದಿಸಿದರು.

