Thursday, January 29, 2026

ಸಮಾಜಮುಖೀ ಸೇವೆಯಲ್ಲಿ ಜಿ. ಪಂ. ಸದಸ್ಯ ತುಂಗಪ್ಪ ಬಂಗೇರ

ಪುಂಜಾಲಕಟ್ಟೆ : ಪಿಲಾತಬೆಟ್ಟು ಗ್ರಾಮದ ಧೈಕಿನಕಟ್ಟೆ – ನರ್ಸಿಕುಮೇರು ಮಾರ್ಗದ ಪೊರಿಮೇಲು ಎಂಬಲ್ಲಿ ಡಾಮರೀಕರಣದ ಮಾರ್ಗ ಹಾಳಾಗಿ ವಾಹನ ಸವಾರರು ಕಷ್ಟಪಟ್ಟು ಹೋಗಬೇಕಾದ ಪರಿಸ್ಥಿತಿಯಿದ್ದು, ಯಂ. ತುಂಗಪ್ಪ ಬಂಗೇರರವರು  ಸೇವಾ ಮನೋಭಾವದ ಯುವಕರನ್ನು ಒಟ್ಟುಗೂಡಿಸಿ ಮಾರ್ಗಕ್ಕೆ ಕಾಂಕ್ರೀಟಿಕರಣದ ಮೂಲಕ ತೇಪೆ ಹಚ್ಚುವ ಕಾರ್ಯವನ್ನು ಮಾಡಿದ್ದಲ್ಲದೇ ಮಾರ್ಗದ ಎರಡೂ ಬದಿಗಳಲ್ಲಿ ಬೆಳೆದು ನಿಂತ ಪೊದೆ, ಕಳೆ ಗಿಡಗಳನ್ನು ಕಡಿದು ಸ್ವಚ್ಛ ಮಾಡಿಸುವ ಕ್ರಿಯೆಯಲ್ಲಿ ತಾನೂ ಸ್ವತಃ ಭಾಗಿಯಾದರು.

ರಾಜಕಾರಣಿಗಳು ಹೇಳಿಕೆಯಲ್ಲೇ ಮೆರೆಯುವ ಈ ಕಾಲದಲ್ಲಿ , ಕಾಯಕದಲ್ಲಿ ತೊಡಗಿಸಿಕೊಂಡ ನಿಜಾರ್ಥದ ಜನಸೇವಕನೊಡನೆ ಕೈ ಜೋಡಿಸಿದ ಕರ್ಮಿಗಳು.

ಸುಧಾಕರ ನಾಕುನಾಡು, ರಾಘವ ನಿರ್ಪಾರಿ, (ಮೇಸ್ತ್ರಿಗಳು) ಸುಂದರ ನಾಯ್ಕ , ದಯಾನಂದ ಶೆಟ್ಟಿಗಾರ , ಭೋಜ ಕುಲಾಲ್, ಪ್ರಭಾಕರ ಪಿ.ಯಂ., ರತ್ನಾಕರ, ಧನ್ಯರಾಜ್, ಕೃಷ್ಣಪ್ಪ ಪುಳಿಮಜಲು, ರುಕ್ಮಯ್ಯ ಕನಲ್ದಪಲ್ಕೆ, ಶ್ರೀಧರ್ ಪೂಜಾರಿ ರಿಕ್ಷಾ, ಪುರುಷೋತ್ತಮ ಅತ್ತಾಜೆ.

More from the blog

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...

ಕಟೀಲು 7 ಮೇಳಗಳ ಜ.29ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಜ.29ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.29ರ ಸೇವೆಯಾಟಗಳ ವಿವರ : ಉಮೇಶ್ ಅತಿಕಾರಿ, ಮುಳಿಂಜೆಗುತ್ತು, 'ಶ್ರೀ ಕೃಪಾ',...

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...

ದೈವೀಕೃಪೆಯಿಂದ ಮಾತ್ರ ಜೀವನರಥ ಎಳೆಯಬಹುದು : ಒಡಿಯೂರುಶ್ರೀ

ವಿಟ್ಲ: ಆತ್ಮರೂಪಿ ಭಗವಂತ ದೇಹದೊಳಗಿರುವಾಗಲೇ ಬದುಕಿನ ಸಾರ್ಥಕತೆ ಪಡೆಯಬೇಕು. ಧರ್ಮದ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ...