ಬಂಟ್ವಾಳ: ಮುಬಾರಕ್ ಜುಮಾ ಮಸೀದಿ ಬಾಂಬಿಲ ಇದರ ವಠಾರದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಹಝ್ರತ್ ವಲಿಯುಲ್ಲಾಹಿ ಅಶೈಖ್ ಸೈಯದುಲ್ ಬುಖಾರಿ ಅವರ ಉರೂಸ್ ಮುಬಾರಕ್ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಮಾ. 19ರಿಂದ 23ರವರೆಗೆ ಬಾಂಬಿಲ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಮಾ. ೧೯ರಂದು ಮಜ್ಲಿಸುನ್ನೂರು ಆಧ್ಯಾತ್ಮಿಕ ಸಂಗಮ ನಡೆಯಲಿದ್ದು, ಸೈಯದ್ ಝೈನುಲ್ ಆಬದೀನ್ ಜಿಫ್ರಿ ತಂಙಳ್ ನೇತೃತ್ವ ವಹಿಸುವರು. ಬಾಂಬಿಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ದೊಡ್ಡಮನೆ ಅಧ್ಯಕ್ಷತೆ ವಹಿಸುವರು. ಮಿತ್ತಬೈಲ್ ಕೆ.ಪಿ.ಇರ್ಷಾದ್ ದಾರಿಮಿ ಅಲ್ ಜಝರಿ ಉದ್ಘಾಟಿಸುವರು. ಮಸೀದಿ ಖತೀಬ್ ಅಬ್ದುಲ್ ಬಶೀರ್ ಯಮಾನಿ ಪ್ರಭಾಷಣ ಮಾಡುವರು. 30ರಂದು ಅಶ್ರಫ್ ಫೈಝಿ ಕೊಡಗು, 21ರಂದು ಅಬೂಬಕರ್ ರಿಯಾಝ್ ರಹ್ಮಾನಿ, 22ರಂದು ಕೆ.ವಿ.ಅಬ್ಬಾಸ್ ದಾರಿಮಿ ಅವರು ಮುಖ್ಯಪ್ರಭಾಷಣ ಮಾಡುವರು.
ಮಾ. 23ರಂದು ಸಂಜೆ ಸಮಾರೋಪ ಸಮಾರಂಭ ಹಾಗೂ ಮೌಲೀದ್ ಪಾರಾಯಣ ನಡೆಯಲಿದ್ದು, ಕೇರಳದ ಎನ್.ಪಿ.ಎಂ. ಸೈಯದ್ ಜಲಾಲುದ್ದೀನ್ ತಂಙಳ್ ಏಝ್ ಮಲ ದುಆಃ ಆಶೀರ್ವಚನ ನೀಡುವರು. ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಎಂಜೆಎಂ ಖತೀಬ್ ಅಬ್ದುಲ್ ಕರೀಂ ಫೈಝಿ ಕುಂತೂರು ಮುಖ್ಯ ಪ್ರಭಾಷಣ ಮಾಡುವರು ಎಂದು ಬಾಂಬಿಲ ಮುಬಾರಕ್ ಜುಮಾ ಮಸೀದಿಯ ಪ್ರಕಟನೆ ತಿಳಿಸಿದೆ.