Wednesday, July 9, 2025

ಪಂಚಾಯತ್ ಸದಸ್ಯರ ಪ್ರಶಿಕ್ಷಣ ವರ್ಗ

ಭಾರತೀಯ ಜನತಾ ಪಕ್ಷ ಬಾಳ್ತಿಲ ಮತ್ತು ನರಿಕೊಂಬು ಮಹಾಶಕ್ತಿ ಕೇಂದ್ರಗಳ ಪಂಚಾಯತ್ ಸದಸ್ಯರ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮ ಕಲ್ಲಡ್ಕದ ಪಂಚವಟಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಾಜಿ ಶಾಸಕರಾದ ಶ್ರೀ ರುಕ್ಮಯ ಪೂಜಾರಿ ಅವರು ಬಿಜೆಪಿ ಜನಸಂಘದಿಂದ ಕಾಲದಿಂದ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ಪ್ರತೀ ಪಂಚಾಯತ್ ಸದಸ್ಯರು ಪಕ್ಷದ ಜವಾಬ್ದಾರಿ ಶಿಸ್ತನ್ನು ತಿಳಿದು ವೈಯಕ್ತಿಕ ಬೆಳವಣಿಗೆಯ ಜೊತೆಗೆ ಪಕ್ಷವನ್ನು ಬೆಳೆಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರದ ಅಧ್ಯಕ್ಷರಾದ  ದೇವಪ್ಪ ಪೂಜಾರಿ ಅವರು ಪಕ್ಷದ ಸಿದ್ಧಾಂತದ ಅಡಿಯಲ್ಲಿ ಆಯ್ಕೆಯಾದ ಪಂಚಾಯತ್ ಸದಸ್ಯರು ತಮ್ಮ ಪಂಚಾಯತ್ ಜವಾಬ್ದಾರಿಯ ಜೊತೆಗೆ ಪಕ್ಷದ ಸಿದ್ಧಾಂತಕ್ಕೂ ಒತ್ತು ನೀಡಿ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ  ಪ್ರತಾಪ್ ಸಿಂಹ ನಾಯಕ್, ಪ್ರಶಿಕ್ಷಣ ವರ್ಗದ ಜಿಲ್ಲಾ ಸಂಚಾಲಕರಾದ  ನಾರಾಯಣ ಭಂಡಾರಿ, ಸಹ ಸಂಚಾಲಕ ವೇದಾನಂದ ಕಾರಂತ, ನರಿಕೊಂಬು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ  ಯಶೋಧರ ಕರ್ಬೆಟ್ಟು , ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘಾಟನೆ ನಂತರ ಪಂಚಾಯತ್ ಸದಸ್ಯರಿಗೆ ಅವಧಿಯನ್ನು ನಡೆಸಲಾಯಿತು .ಪ್ರಥಮ ಅವಧಿ ಪಂಚ ಸದಸ್ಯರ ಅಧಿಕಾರ ಮತ್ತು ಕರ್ತವ್ಯ ಈ ಅವಧಿಯನ್ನು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ರವರು ನೀಡಿದರು .  ಎರಡನೇ ಅವಧಿ ನಮ್ಮ ವಿಚಾರ ಮತ್ತು ಪರಿವಾರ ಈ ವಿಚಾರದ ಬಗ್ಗೆ ಡಾಕ್ಟರ್ ಪ್ರಭಾಕರ ಭಟ್ ( ಹಿರಿಯ ಸ್ವಯಂಸೇವಕರು ಅಧ್ಯಕ್ಷರು  ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ) ಹಾಗೂ ಮೂರನೇ ಅವಧಿ ಬಿಜೆಪಿ ನಡೆದು ಬಂದ ಹಾದಿ ಈ ವಿಷಯದ ಬಗ್ಗೆ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ರವರು ನಡೆಸಿಕೊಟ್ಟರು . ಸಮಾರೋಪ ಕಾರ್ಯಕ್ರಮವು ಬೂಡದ ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರಗಿತು .ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮೋಹನ್ ಪಿ ಎಸ್ ಯಶೋಧರ ಕರ್ಬೆಟ್ಟು ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಣಿ ಸದಸ್ಯರಾದ ದಿನೇಶ್ ಅಮ್ಟೂರು ಉಪಸ್ಥಿತರಿದ್ದರು .

ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ  ಮೋಹನ್ ಪಿ ಎಸ್ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ಬರಿಮಾರು ವಂದಿಸಿ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯಮತ್ತು ಪುರುಷೋತ್ತಮ ಸಾಲ್ಯಾನ್ ನರಿಕೊಂಬು ನಿರೂಪಿಸಿದರು.

More from the blog

ಭಾರೀ ಮಳೆ ಮುನ್ಸೂಚನೆ : ಒಂದು ವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 14ರವರೆಗೆ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು,...

ಕುಡ್ತಮುಗೇರು: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು 

ವಿಟ್ಲ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43 ವ.) ಮೃತಪಟ್ಟವರು. ಜು.7ರಂದು ಬೆಳಗ್ಗೆ...

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...