ವಿಟ್ಲ: ಆಧುನಿಕ ತಂತ್ರಜ್ಞಾನಗಳಿಂದ ಹಲವಾರು ಕಲೆಗಳು ನಶಿಸುವ ಅಂಚಿನಲ್ಲಿದೆ. ಸತ್ಯ ಹಾಗೂ ಮಿತ್ಯದ ನಡುವಿನಲ್ಲಿ ನಡೆಯುವಂತಹದ್ದು ಯಕ್ಷಿಣಿ ವಿದ್ಯೆ. ಕಲಾಗಾರಿಕೆಯ ಪ್ರದರ್ಶನಕ್ಕೆ ಜನರಿರಬೇಕಾದ್ದು ಮುಖ್ಯ ಎಂದು ಬಾಳೆಕೋಡಿ ಶ್ರೀ ಕಾಶೀಕಾಳಾಭೈರವೇಶ್ವರ ಶಿಲಾಂಜನ ಕ್ಷೇತ್ರದ ಡಾ. ಶಶಿಕಾಂತಮಣಿ ಸ್ವಾಮೀಜಿ ಹೇಳಿದರು.
ಅವರು ಚಂದಳಿಕೆ ಭಾರತ ಅಡಿಟೋರಿಯಂನಲ್ಲಿ ಕಲ್ಲಡ್ಕ ಮಾಯಾಲೋಕದ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಮಾತನಾಡಿ ಕಲೆಯನ್ನು ಬೆಳೆಸಿ ಉಳಿಸುವ ಕಾರ್ಯ ಜನರಿಂದ ನಡೆಯಬೇಕು. ಕಲಾವಿದನನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಚಿಣ್ಣರ ಮನೆ ಆರ್.ಕೆ ಆರ್ಟ್ಸ್‌ನ ಮಕ್ಕಳಿಂದ ನೃತ್ಯ, ಯಕ್ಷಗಾನ ಹಾಡುಗಳ ಹಾಗೂ ಧ್ವನಿಗಳ ಅನುಕರಣೆ, ಜಾದೂ, ಮಿಮಿಕ್ರಿ, ಹಾಸ್ಯ ಕಾರ್ಯಕ್ರಮ ನಡೆಯಿತು.
ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಪಿ. ಜಯರಾಮ್ ರೈ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಪಾರೆಸ್ಟ್ ಗುತ್ತಿಗೆದಾರ ಆರ್. ಆರ್. ಶೆಟ್ಟಿ, ಉಪ್ಪಿನಂಗಡಿ ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಟಿನಿ, ವಿಟ್ಲ ಜೆಸಿಐ ಬಾಲಕೃಷ್ಣ ವಿಟ್ಲ, ಭಾರತ ಅಡಿಟೋರಿಯಂ ಮಾಲಕ ಡಿ. ಸಂಜೀವ, ಆರ್ ಕೆ ಆರ್ಟ್ಸ್‌ನ ರಾಜೇಶ್ ವಿಟ್ಲ ಉಪಸ್ಥಿತರಿದ್ದರು.
ಸ್ನೇಹ ಶೆಟ್ಟಿ ಪ್ರಾರ್ಥಿಸಿದರು. ಶ್ಯಾಂ ಜಾದೂಗಾರ್ ಪ್ರಸ್ತಾವನೆಗೈದರು. ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

