Tuesday, July 8, 2025

ಬರಿಮಾರು ಗ್ರಾಮ ಪಂಚಾಯತ್ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ: ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಮಹಿಳೆಯೋರ್ವಳು ಸರಕಾರಿ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ, ಜೀವ ಬೆದರಿಕೆ ಹಾಕಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಬರಿಮಾರು ಗ್ರಾಮ ಪಂಚಾಯತ್ ದೂರು ನೀಡಿದೆ.
ಬರಿಮಾರು ಕಾಗೆಕಾನ ನಿವಾಸಿ ಪುಷ್ಪಾ ಶೆಟ್ಟಿ ಎಂಬವರು ಬರಿಮಾರು ಗ್ರಾಮ ಪಂಚಾಯತ್ ಸಿಬ್ಬಂದಿಗಳ ಕರ್ತವ್ಯ ಅಡ್ಡಿಪಡಿಸಿದಲ್ಲದೆ, ಪಂಚಾಯತ್ ನ ಕಚೇರಿಯ ಒಳಗೆ ನುಗ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಸ್ಯರ ಮುಂದೆಯೇ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.
ಪುಷ್ಪ ಶೆಟ್ಟಿ ಮಂಗಳೂರು ಬ್ಯಾಂಕ್ ಒಂದರಿಂದ ಸಾಲ ಪಡೆದಿದ್ದು, ಸಾಲ ಮರುಪಾವತಿ ಮಾಡದೆ ಜಮೀನು ಏಲಂಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಬರಿಮಾರು ಗ್ರಾಮ ಪಂಚಾಯತ್ ಗೆ ಪುಷ್ಪ ಶೆಟ್ಟಿ ಅವರ ಜಮೀನು ಏಲಂ ಮಾಡುವ ಬಗ್ಗೆ ಏಲಂ ನೋಟಿಸ್ ನ್ನು ಕಳುಹಿಸಿ ನೋಟೀಸ್ ನ್ನು ಬೋರ್ಡ್ ನಲ್ಲಿ ಹಾಕುವಂತೆ ಕೋರಿತ್ತು.
ಬ್ಯಾಂಕ್ ಕೋರಿಕೆಯಂತೆ ಏಲಂ ನೋಟಿಸನ್ನು ಬೋರ್ಡ್ ನಲ್ಲಿ ಗ್ರಾಮ‌ ಪಂಚಾಯತ್  ಹಾಕಿತ್ತು. ಆದರೆ ಪಂಚಾಯತ್ ಹಾಕಿದ ನೋಟೀಸ್ ನ್ನು ಪದೇ ಪದೇ ಹರಿದು ಹಾಕಿದ್ದಲ್ಲದೆ, ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿ ನಿಂದನೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯತ್ ದೂರು ನೀಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಐದು ದಿನ ಕಳೆದರೂ ಆರೋಪಿಯ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯತ್ ಜಿ.ಪಂ.ಮುಖ್ಯಕಾರ್ಯನಿರ್ವಣಾಧಿಕಾರಿಯವರಲ್ಲಿ ದೂರಿಕೊಂಡಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ತಿಳಿಸಿದ್ದಾರೆ ಎಂದು ಪಂಚಾಯತ್ ಮೂಲಗಳು ತಿಳಿಸಿವೆ.

More from the blog

Bantwal: ಅಪ್ರಾಪ್ತ ಬಾಲಕ ನೇಣಿಗೆ ಶರಣು:ಕಾರಣ ನಿಗೂಡ

ಬಂಟ್ವಾಳ: ಅಪ್ರಾಪ್ತ ಬಾಲಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ಜುಲೈ 7 ರಂದು ಸಂಜೆ ವೇಳೆ ನಡೆದಿದೆ. ತುಂಬೆ ಪರ್ಲಕ್ಕೆ ನಿವಾಸಿ ಕರುಣಾಕರ ಗಟ್ಟಿ ಅವರ...

ಕುಜ್ಲುಬೆಟ್ಟು ಶಾಲೆ : ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಂಟ್ವಾಳ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಶಾಲಾಭಿವೃದ್ಧಿ ಸಮಿತಿ ಕುಜ್ಲುಬೆಟ್ಟು ಇದರ ಸಹಯೋಗದೊಂದಿಗೆ ಇಂದು ಶಾಲಾ ಪರಿಸರದಲ್ಲಿ...

Puttur : ನಾಪತ್ತೆಯಾಗಿದ್ದ ಯುವತಿ ಮನೆಗೆ ಬಿಜೆಪಿ ಪ್ರಮುಖರು, ಹಿಂದೂ ಸಂಘಟನೆಯ ಮುಖಂಡರು ಭೇಟಿ..

ಪುತ್ತೂರು: ಪುತ್ತೂರಿನಿಂದ ಇತ್ತೀಚೆಗೆ ನಾಪತ್ತೆಯಾಗಿದ್ದು, ನಂತರ ಬೆಂಗಳೂರಿನಲ್ಲಿ ಪತ್ತೆಯಾದ ಯುವತಿ ರೂಪ ಅವರ ಮನೆಗೆ ಬಿಜೆಪಿ ಪ್ರಮುಖರು ಹಾಗೂ ಹಿಂದೂ ಸಂಘಟನೆಯ ಮುಖಂಡರು ಭೇಟಿ ನೀಡಿದ್ದಾರೆ. ಯುವತಿಯ ಪತ್ತೆಯಾದ ನಂತರ, ಹಿಂದೂ ಸಂಘಟನೆಯ ಮುಖಂಡರು,...

ಬೂಡಾ ಸಹಾಯಕ ಕಾರ್ಯದರ್ಶಿಯಾಗಿ ಗಾಯತ್ರಿ ಡೊಂಬರ್ ಅಧಿಕಾರ ಸ್ವೀಕಾರ..

ಬಂಟ್ವಾಳ : ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸಹಾಯಕ ಕಾರ್ಯದರ್ಶಿಯಾಗಿ ಶ್ರೀಮತಿ ಗಾಯತ್ರಿ ಡೊಂಬರ್ ಅಧಿಕಾರ ಸ್ವೀರಕರಿಸಿದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್ ಮತ್ತು ಸಿಬಂಧಿವರ್ಗ ಉಪಸ್ಥಿತರಿದ್ದರು.