Wednesday, February 4, 2026

ಬಡಗಕಜೆಕಾರು ಶಾಲೆಯಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ

ಬಂಟ್ವಾಳ: ಬಡಗಕಜೆಕಾರು ಹಳೆ ವಿದ್ಯಾರ್ಥಿ ಸಂಘ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡ ಒಕ್ಕೂಟದ ವತಿಯಿಂದ ಬಡಗಕಜೆಕಾರು ಶಾಲೆಯಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜರಗಿತು.

ಬೆಳಗ್ಗೆ 10 ಗಂಟೆಗೆ ಪುಂಜಾಲಕಟ್ಟೆ ಆರಕ್ಷಕ ಠಾಣಾ ಅಧಿಕಾರಿ ಸೌಮ್ಯ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿಕೊಟ್ಟರು. ನಂತರ ಶಾಲಾ ಮಕ್ಕಳಿಂದ ಕವಾಯತು ನಡೆಸಲಾಯಿತು.
ಬೆಳಗಿನ ಸಭಾ ಕಾರ್ಯಕ್ರಮದಲ್ಲಿ ಬಡಗಕಜೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ವಜ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹರಿಶ್ಚಂದ್ರ ಪೂಜಾರಿ, ಬಂಟ್ವಾಳ ಎಪಿಎಂಸಿ ಸದಸ್ಯರು, ಧರ್ಮರಾಜ ಜೈನ್ ಕಿಜಾನಾ ರು, ತುಂಗಪ್ಪ ಬಂಗೇರ , ಗ್ರಾ.ಪಂ. ಸದಸ್ಯರಾದ ಶೋಭಾ, ಪ್ರವೀಣ್ ಗೌಡ, ಒಕ್ಕೂಟ ಅಧ್ಯಕ್ಷ ಮಾಧವ ಪೂಜಾರಿ, ಗೋಪಾಲ ಪೂಜಾರಿ, ಎಸ್.ಕೆ.ಡಿ.ಆರ್‍.ಪಿ. ಮೇಲ್ವಿಚಾರಕರಾದ ಭವಾನಿ, ಮಾಲತಿ ಶೋಭಾ, ವೇಣೂರು ಕುಂಭಶ್ರೀಯ ಸಂಚಾಲಕ ಗಿರೀಶ ಎಚ್., ಪ್ರಾಂಶುಪಾಲ ರಕ್ಷಿತ್ ಕುಲಾಲ್ ರು , ಡೀಕಯ್ಯ ಬಂಗೇರ ಕರ್ಲ, ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯ ಉಪಾಧ್ಯಾಯ ಸೀತಾರಾಮ್ ಸ್ವಾಗತಿಸಿ, ಶಿಕ್ಷಕಿ ಗೀತಾ ಪ್ರಶಸ್ತಿ ವಾಚಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಮಾಡ ವಂದಿಸಿದರು. ದೇವದಾಸ್ ಮತ್ತು ತಾರನಾಥ್ ಕಾರ್ಯಕ್ರಮ ನಿರೂಪಿಸಿದರು.

More from the blog

ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಗೆ ಹನೀಫ್ ಬಗ್ಗುಮೂಲೆ ಹಾಗೂ ಸಿದ್ದೀಕ್ ಸೂರ್ಯ ನೇಮಕ

ಬಂಟ್ವಾಳ : ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಳಕೆಮಜಲು ಸಮೀಪದ ಬಗ್ಗುಮೂಲೆ ನಿವಾಸಿ ಹನೀಫ್ ಬಗ್ಗುಮೂಲೆ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಯುವ ಸಂಘಟಕ, ಯುವ ಉದ್ಯಮಿ,...

ಪಾಕಿಸ್ತಾನಕ್ಕೆ ಹೋಲಿಸಿದಾಗ ಸಿಟ್ಟುಗೊಳ್ಳುವ ನೀವು, ನಮ್ಮ ಸೈನಿಕರ ಮೇಲೆ ಪಾಕ್ ಪ್ರೇರಿತ ಉಗ್ರರಿಂದ ದಾಳಿಯಾದಾಗ ಖಂಡಿಸುವುದಿಲ್ಲ ಏಕೆ?

ಬೆಂಗಳೂರು: "ಶಾಸಕ ಸಿ.ಟಿ. ರವಿ ಅವರು ಕಾಂಗ್ರೆಸ್ ಸದಸ್ಯರ ಹೇಳಿಕೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದಾಗ ನಿಮಗೆ ತೀವ್ರ ಕೋಪ ಬರುತ್ತದೆ. ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಎಂಬ ಅರಿವು ನಿಮಗಿದ್ದರೆ, ಪುಲ್ವಾಮಾ ಮತ್ತು ಪಹಲ್ಗಾಮ್‌ಗಳಲ್ಲಿ...

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಕುದ್ರೆಬೆಟ್ಟು : ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ – ನಾಲ್ವರಿಗೆ ಗಾಯ

ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಮೇಲತ್ಸುವೆಯ ಕೊನೆಯ ಭಾಗದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಅಳಕೆಮಜಿಲು ನಿವಾಸಿ ಅವ್ವಮ್ಮ ಹಾಗೂ ಸುಹೈಲ್ ರಿಕ್ಷಾ...