ಬಂಟ್ವಾಳ : ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಣಿನಾಲ್ಕೂರು ಗ್ರಾಮದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸರಪಾಡಿ ಇದರ ಬ್ರಹ್ಮಕಲಶೋತ್ಸವ ೨೦೨೨ ಮಾ.೨೩ರಿಂದ ಮಾ.೨೭ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಪೂರ್ವಭಾವಿ ಸಮಾಲೋಚನ ಸಭೆ ಬಾಚಕೆರೆ ದೇವಸ್ಥಾನದ ಸಭಾಂಗಣದಲ್ಲಿ ನ.೭ರಂದು ನಡೆಯಿತು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ, ಉತ್ತಮ ಆಚರಣೆ, ಸಿದ್ಧಾಂತಗಳು ವೈಭವೀಕರಣಗೊಂಡು ದೇವರಿಗೆ ಬ್ರಹ್ಮಕಲಶದ ಜತೆ ಊರಿನ ಅಭಿವೃದ್ಧಿಯ ಬ್ರಹ್ಮ ಕಲಶವೂ ನಡೆಯಬೇಕು ಎಂದು ಹೇಳಿದರು. ದುರಹಂಕಾರ,ಆಡಂಬರಗಳನ್ನು ದೂರಗೊಳಿಸಿ ದೇವರು ಕೊಟ್ಟ ಆಯುಷ್ಯವನ್ನು ಸದ್ವಿನಿಯೋಗಗೊಳಿಸಬೇಕು.ಸೇವಾ ಮನೋಭಾವನೆಯಿಂದ ದೇವರ ಆರಾಧನೆ ನಡೆಯಬೇಕು ಎಂದು ಅವರು ನುಡಿದರು.
ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅವರು ಮಾತನಾಡಿ, ಪುರಾಣ ಐತಿಹ್ಯವಿರುವ ಪುಣ್ಯಕ್ಷೇತ್ರ ಬಾಚಕೆರೆಯಲ್ಲಿ ಶ್ರೀ ದುರ್ಗಾಪರಮೇಶ್ವರಿಯನ್ನು ಆರಾಽಸಿಕೊಂಡು ಬರುತ್ತಿದ್ದು, ಭಕ್ತರ ಸಹಕಾರದಿಂದ ದೇಗುಲ ನಿರ್ಮಾಣ ಸಾಧ್ಯವಾಗಿದೆ ಎಂದ ಅವರು ಬ್ರಹ್ಮಕಲಶದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ ಅವರು ಮಾತನಾಡಿದರು. ಪ್ರ.ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ ಅವರು ದೇಗುಲ ನಿರ್ಮಾಣದ ಖರ್ಚು ವೆಚ್ಚಗಳ ಮಾಹಿತಿ ನೀಡಿದರು.
ದೇಗುಲದ ಪ್ರ.ಅರ್ಚಕ ದಯಾನಂದ ಐತಾಳ, ರತ್ನಾಕರ ಕೊಂಡೆ ನಾಲೂರುಗುತ್ತು, ಶ್ರೀನಿವಾಸ ಭಟ್ ಕಯ್ಯಾಳ, ಬಿ.ಪದ್ಮಶೇಖರ ಜೈನ್,ಮೋಹನದಾಸ ಶೆಟ್ಟಿ ಮುನ್ನಲಾಯಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ರಚನೆ ನಡೆಯಿತು. ಬಿ.ಸಿ.ರೋಡ್ ಉದ್ಯಮಿ ಸಂಜೀವ ಪೂಜಾರಿ ಗುರುಕೃಪಾ ಅವರು ಸಮಿತಿ ಅಧ್ಯಕ್ಷರಾಗಿ, ಶ್ರೀನಿವಾಸ ಭಟ್ ಕಯ್ಯಾಳ ಕಾರ್ಯಾಧ್ಯಕ್ಷರಾಗಿ, ಜಯಂತ ನಡುಬಲ್ ಉಪಾಧ್ಯಕ್ಷರಾಗಿ, ದಯಾನಂದ ಶೆಟ್ಟಿ ಬಿ.ಸಿ.ರೋಡ್ ಪ್ರ.ಕಾರ್ಯದರ್ಶಿಯಾಗಿ, ಸುಂದರ ಬಾಚಕೆರೆ ಕೋಶಾಽಕಾರಿಯಾಗಿ ಆಯ್ಕೆಯಾದರು. ಇತರ ಉಪ ಸಮಿತಿಗಳ ಆಯ್ಕೆ ನಡೆಯಿತು.
ಪ್ರಮುಖರಾದ ಶಿವರಾಮ ಶೆಟ್ಟಿ, ಚಂದ್ರಶೇಖರ ಹೊಳ್ಳರಗುತ್ತು, ಪುರುಷೋತ್ತಮ ಪೂಜಾರಿ ಮಜಲು, ಧನಂಜಯ ಶೆಟ್ಟಿ, ವಿಶ್ವನಾಥ ಗೋಸ್ವಾಮಿ, ಎಲ್‌ಕೆ.ಧರಣ್, ಸಂಪತ್ ಕುಮಾರ್ ಶೆಟ್ಟಿ, ಸಂತೋಷ್ ನೇಲ್ಯಪಲ್ಕೆ, ಸಂಜೀವ ಪೂಜಾರಿ ಕೂರೇಲು, ಕುಸುಮಾಕರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಡಾ. ರಾಧಾಕೃಷ್ಣ ಶೆಟ್ಟಿ, ಶಶಿಕಾಂತ ಶೆಟ್ಟಿ, ಸಾಯಿ ಶಾಂತಿ, ಶಾಂತಪ್ಪ ಪೂಜಾರಿ, ಲೋಕಯ್ಯ ಸೇರಾ, ಆನಂದ ಶೆಟ್ಟಿ, ನಾಗೇಶ್ ನೈಬೇಲ್, ಶಶಿಧರ ಬಾಚಕೆರೆ, ಗಿರಿನಾಥ ಶರ್ಮ ಮತ್ತಿತರರು ಉಪಸ್ಥಿತರಿದ್ದರು.
ನಿರಂಜನ್ ಬಾಚಕೆರೆ ಸ್ವಾಗತಿಸಿದರು. ರಾಧಾಕೃಷ್ಣ ರೈ ವಂದಿಸಿದರು.ಸರಪಾಡಿ ಅಶೋಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


