ಬಂಟರ ಸಂಘ ಬಂಟ್ವಾಳ ತಾಲೂಕು ಯುವ ವಿಭಾಗದ ವತಿಯಿಂದ ದೀಪಾವಳಿ ಪ್ರಯುಕ್ತ ಬೊಲ್ಪುದ ಐಸಿರ ಎಂಬ ತುಳುವ ಸಾಂಪ್ರದಾಯಿಕ ಸೊಗಡಿನೊಂದಿಗೆ ಹಮ್ಮಿಕೊಂಡಿರುವ ವೈವಿಧ್ಯಮಯ ವೈಶಿಷ್ಟಪೂರ್ಣ ಕಾರ್ಯಕ್ರಮ ನಿನ್ನೆ ಬಂಟರ ಭವನದಲ್ಲಿ ಜರಗಿತು.



ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ರವರು ದೀಪ ಬೆಳಗಿಸಿ ಬಲಿಂದ್ರ ಕರೆಯುವ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಬಳಿಕ ಆಕಾಶ ಬುಟ್ಟಿ ಗಳನ್ನು ಹಾರಿಸುವ ಮೂಲಕ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಂಟರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಚಂದ್ರಹಾಸ್ ಡಿ ಶೆಟ್ಟಿ, ಪ್ರದಾನ ಕಾರ್ಯದರ್ಶಿ ಜಗನ್ನಾಥ ಚೌಟ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜತೆ ಕೋಶಾಧಿಕಾರಿ ಪ್ರಫುಲ್ಲ ರೈ, ಜತೆ ಕಾರ್ಯದರ್ಶಿ ರಂಜಾನ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷರಾದ ರಮಾ ಭಂಡಾರಿ, ಯುವ ವಿಭಾಗದ ಅಧ್ಯಕ್ಷರಾದ ನಿಶಾನ್ ಆಳ್ವ, ಉಪಾಧ್ಯಕ್ಷರಾದ ಕರುಣ್ ಶೆಟ್ಟಿ, ಕಾರ್ಯದರ್ಶಿ ಗೋಕುಲ್ ಶೆಟ್ಟಿ ಕೋಶಾಧಿಕಾರಿ ಶುಭಕರ ಶೆಟ್ಟಿ, ಜತೆ ಕಾರ್ಯದರ್ಶಿ ದೀಪಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
ದೀಪಾವಳಿ ಸಡಗರದ ಪಟಾಕಿ ಹಬ್ಬ , ಚೆಂಡೆ ತಾಳ ಗಳ ಜೊತೆ ಅಬ್ಬರದ ಕುಣಿತ , ನುರಿತ ಕಲಾವಿದರಿಂದ ಗಾನ- ನಾಟ್ಯ – ವೈಭವ , ದಾಂಡಿಯಾ ನೃತ್ಯ , ಎಲ್ಲಾ ವಲಯದಿಂದ ರಂಗೋಲಿ ರಚನೆ ಮತ್ತಿ ಹಣತೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನ ನಡೆಯಿತು












