ಬಂಟ್ವಾಳ: ಬಿಸಿರೋಡಿನ ಅಯ್ಯಪ್ಪ ವ್ರತದಾರಿಗಳಿಂದ ತ್ರಿಶೂರ್ ದೇವಾಲಯ ದಲ್ಲಿ ಸ್ವಚ್ಚತಾ ಕಾರ್ಯಕ್ರಮದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ .



ಬಂಟ್ವಾಳ ತಾಲೂಕಿನ ಸುಮಾರು 70 ಅಯ್ಯಪ್ಪ ವ್ರತದಾರಿಗಳು ಈ ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.
ಬಿಸಿರೋಡಿನ ಪೋಲೀಸ್ ಲೈನ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ಸನ್ನಿದಾನದಿಂದ ರಮಾನಂದ ಗುರುಸ್ವಾಮಿ ಅವರ ನೇತ್ರತ್ವದಲ್ಲಿ 70 ಮಂದಿ ಅಯ್ಯಪ್ಪ ಮಾಲಾಧಾರಿಗಳು ಜ.10 ಶಬರಿಮಲೆ ಅಯ್ಯಪ್ಪ ಬೆಟ್ಟಕ್ಕೆ ತೆರಳಿದ್ದರು.
ಇಂದು ಇವರು ಶಬರಿಮಲೆ ಯಾತ್ರೆ ಮುಗಿಸಿ ವಾಪಾಸುಗುವ ವೇಳೆ ತ್ರಿಶೂರ್ ಈಶ್ವರ ದೇವಾಲಯ ಕ್ಕೆ ಬೇಟಿ ನೀಡಿ ದೀಪಾರಾಧನೆ ಸೇವೆ ಮಾಡಿದ ಬಳಿಕ ಸುಮಾರು 2 ಗಂಟೆಯಿಂದ 5.30 ಗಂಟೆಯವರೆಗೆ ಈ ದೇವಾಲಯದ ಸುತ್ತ ಸ್ವಚ್ಚತಾ ಕಾರ್ಯ ನಡೆಸಿ ದೇವರ ಸೇವೆ ಮಾಡಿ ಇತರರಿಗೆ ಮಾದರಿಯಾದರು.
