ಬಂಟ್ವಾಳ: ಬಸ್ ನಲ್ಲಿ ಹೃದಯಾಘಾತಗೊಂಡು ಸಾವನ್ನಪ್ಪಿದ ಘಟನೆ ಇದೀಗ ಬಿಸಿರೋಡಿನ ಲ್ಲಿ ಬೆಳಕಿಗೆ ಬಂದಿದೆ.


ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್ ನಲ್ಲಿ ಈ ಘಟನೆ ನಡೆದಿದೆ.
ಸುಮಾರು ( 55)ವರ್ಷ ವಯಸ್ಸಿನ ವ್ಯಕ್ತಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಬಂಟ್ವಾಳ ನಗರ ಠಾಣಾ ಸಮೀಪ ಸ್ಟೇಟ್ ಬ್ಯಾಂಕ್ ಬಳಿ ಬಸ್ ನಿಲ್ಲಿಸಿದ್ದಾರೆ.
ಬಂಟ್ವಾಳ ನಗರ ಠಾಣಾ ಪೋಲೀಸರು ಬಸ್ ಬಳಿ ಬಂದು ವಿಚಾರಣೆ ನಡೆಸುತ್ತಿದ್ದಾರೆ.
ಇವರು ಎಲ್ಲಿ ಯವರು ಯಾವ ಕಡೆಗೆ ತೆರಳುತ್ತಿದ್ದರು ಎಂಬುದು ಇನ್ನಷ್ಟೆ ತಿಳಿಯ ಬೇಕಾಗಿದೆ.
ಇವರು ಮೈಸೂರಿನಿಂದ ಒಬ್ಬರೇ ಬಸ್ ಗೆ ಹತ್ತಿದ್ದರು.
ಬಸ್ ಸೀಟಿನಲ್ಲಿ ಕುಳಿತು ಕೊಂಡು ಕಿವಿಗೆ ಮೊಬೈಲ್ ಇಯರ್ ಪೋನ್ ಅಳವಡಿಸಿ ಮಲಗಿದ ಸ್ಥಿತಿಯಲ್ಲಿ ಇದ್ದಾರೆ.
ಯಾರೋ ಪ್ರಯಾಣಿಕರಿಗೆ ಸಂಶಯ ಬಂದು ನೋಡಿದಾಗ ಗಮನಕ್ಕೆ ಬಂದಿದೆ.
ಇವರು ಪಾಣೆಮಂಗಳೂರು ವರೆಗೂ ಮಾತನಾಡಿಕೊಂಡು ಬರುತ್ತಿದ್ದರು.ಇದ್ದಕ್ಕಿದ್ದಂತೆ ಇವರ ಮೊಬೈಲ್ ಕೆಳಗೆ ಬಿತ್ತಿ ಬಳಿಕ ನೋಡಿದಾಗ ಇವರು ಸಾವನ್ನಪ್ಪಿದ ಬಗ್ಗೆ ಸಂಶಯ ಬಂದು ಬಸ್ ನಿರ್ವಾಹಕನಿಗೆ ಸಹ ಪ್ರಯಾಣಿಕರು ತಿಳಿಸಿದ್ದಾರೆ.
ಅವರು ಬಿಸಿರೋಡು ವರಗೆ ಬಂದು ಠಾಣೆ ಗೆ ದೂರು ನೀಡಿದ್ದಾರೆ.
ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ್ ಹಾಗೂ ಅಪರಾಧ ವಿಭಾಗದ ಎಸ್.ಐ. ಸುಧಾಕರ ತೋನ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪೋಲೀಸರ ತನಿಖೆಯ ವೇಳೆ ಮೃತರ ಬಳಿ ಅದಾರ್ ಕಾರ್ಡ್ ದೊರೆತಿದ್ದು ಅದರಲ್ಲಿ ಮಂಜುನಾಥ್ ಭಟ್ ಬೆಳಗಾಂ ನ ಅಥನಿ ಎಂದು ವಿಳಾಸ ಸಿಕ್ಕಿದೆ ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ತಿಳಿಸಿದ್ದಾರೆ.