ಕಕ್ಯಪದವು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿ ಸೆರೆ
ಪುಂಜಾಲಕಟ್ಟೆ ಆ.೧: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಗುರುವಾರ ಬಂಟ್ವಾಳ ತಾಲೂಕಿನ ಕಕ್ಯಪದವಿನಲ್ಲಿ ಸಂಭವಿಸಿದೆ.
ತನ್ನ ಅಂಗಡಿಗೆ ಬಂದ ೧೧ ವರ್ಷದ ಬಾಲಕಿಯ ಮೇಲೆ ಆರೋಪಿ ಜು.೩೧ ರಂದು ಲೈಂಗಿಕ ದೌರ್ಜನ್ಯ ನಡೆಸಿದ್ದು, ಬಾಲಕಿಯ ಮನೆಯವರು ಆ.೧ರಂದು ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ,
ಕಕ್ಯಪದವು ಜುವೆಲರಿ ಮಾಲಕ ಯೋಗೀಶ ಆಚಾರ್ಯ(೩೫)ಬಂತ ಆರೋಪಿಯಾಗಿದ್ದಾನೆ. ಆತ ವಿವಾಹಿತನಾಗಿದ್ದು, ಒಂದು ಮಗುವಿನ ತಂದೆಯಾಗಿದ್ದಾನೆ.
ಬಾಲಕಿ ಸಂಜೆ ಸುಮಾರು ೪.೩೦ ಹೊತ್ತಿಗೆ ತನ್ನ ಅಂಗಡಿಗೆ ಬಂದಿದ್ದ ಸಂದರ್ಭ ಉಪಯೋಗಿಸಿ ಆರೋಪಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಳಿಕ ಬಾಲಕಿ ಮನೆಗೆ ಅಳುತ್ತಾ ತೆರಳಿದ್ದಳು. ಮನೆ ಮಂದಿ ವಿಚಾರಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿತ್ತು. ಗುರುವಾರ ಬಾಲಕಿಯ ತಾಯಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಬಳಿಕ ಆರೋಪಿಯನ್ನು ಬಂಸಲಾಗಿತ್ತು. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಂಜಾಲಕಟ್ಟೆ ಠಾಣೆಯಲ್ಲಿ ಫೋಕ್ಸೋ ಖಾಯ್ದೆಯನ್ವಯ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

