Saturday, January 31, 2026

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಗೋಮಯ ಹಣತೆ ಸಿದ್ದ..!

ಬಂಟ್ವಾಳ: ಪ್ರಧಾನಿಯವರ ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನೇ ತರಬೇತುಗೊಳಿಸಿ ಗೋಮಯ ಹಣತೆಗಳನ್ನು ಸಿದ್ಧಗೊಳಿಸಲಾಗುತ್ತಿದ್ದು, ಈ ಬಾರಿಯ ದೀಪಾವಳಿಗೆ ಸುಮಾರು 10 ಸಾವಿರ ಹಣತೆಗಳನ್ನು ಸಿದ್ಧಗೊಳಿಸುವ ಗುರಿಯೊಂದಿಗೆ ಈಗಾಗಲೇ ಎರಡೂವರೆ ಸಾವಿರಕ್ಕೂ ಅಧಿಕ ಹಣತೆಗಳು ಸಿದ್ಧಗೊಂಡಿದೆ.

ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿಗಳು ಸ್ವಾವಲಂಬಿಗಳಾಗುವ ಜತೆಗೆ ವಿದೇಶಿ ವಸ್ತುಗಳಿಂದ ದೂರವಿರಬೇಕು ಎಂದು ಈ ಕಾರ್ಯವನ್ನು ಮಾಡುತ್ತಿದ್ದು, ವಿದ್ಯಾಸಂಸ್ಥೆಯ ವಸುಧಾರಾ ಗೋಶಾಲೆಯಲ್ಲಿರುವ ದೇಶೀಯ ಗೋವುಗಳ ಸೆಗಣಿ ಹಾಗೂ ಗೋಮಯವನ್ನು ಬಳಸಿಕೊಂಡೇ ಈ ಹಣತೆಗಳನ್ನು ಸಿದ್ಧಗೊಳಿಸಲಾಗುತ್ತಿದೆ.
ವಿದ್ಯಾರ್ಥಿಗಳೇ ಸೇರಿಕೊಂಡು ಹಣತೆ ಸಿದ್ಧ ಮಾಡುತ್ತಿದ್ದು, ಸೆಗಣಿಯನ್ನು ಬೇಕಾದಷ್ಟು ಪಾಕ ಭರಿಸಿ, ಅಚ್ಚಿಯಲ್ಲಿ ಒತ್ತಿ ಬಳಿಕ ಬಿಸಿಲಿನಲ್ಲಿ ಇಡಲಾಗುತ್ತದೆ. ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಅವರು ಈ ಕಾರ್ಯದ ಸಂಚಾಲಕರಾಗಿದ್ದು, ಜತೆಗೆ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು ಸಾಥ್ ನೀಡುತ್ತಿದ್ದಾರೆ.

ಸುಮಾರು 50ರಷ್ಟು ವಿದ್ಯಾರ್ಥಿಗಳು:
ಒಟ್ಟು 10 ಸಾವಿರ ಹಣತೆಗಳ ಗುರಿಯೊಂದಿಗೆ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಗುರಿಯೊಂದಿಗೆ ಈ ಕಾರ್ಯ ನಡೆಯುತ್ತಿದ್ದು, ಪ್ರತಿ ದಿನ 50ರಷ್ಟು ವಿದ್ಯಾರ್ಥಿಗಳು, 10 ಮಂದಿ ಆಸಕ್ತ ಪೋಷಕರು, 8 ಮಂದಿ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗುತ್ತಿದ್ದು, ಇವರನ್ನು ಎರಡು ಬ್ಯಾಚ್‌ಗಳನ್ನಾಗಿ ಮಾಡಿ ಪ್ರಾರಂಭದಲ್ಲಿ ತರಬೇತಿ ನೀಡಿ ಬಳಿಕ ಹಣತೆ ತಯಾರಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.
ಹಣತೆಯ ತಯಾರಿಗೆ ವ್ಯಯಿಸಲಾದ ಖರ್ಚನ್ನು ಸರಿದೂರಿಸುವ ನಿಟ್ಟಿನಲ್ಲಿ ಒಂದು ಹಣತೆಯನ್ನು 5 ರೂ.ಗಳಂತೆ ಮಾರಾಟಕ್ಕೂ ಯೋಜನೆ ಹಾಕಿಕೊಳ್ಳಲಾಗಿದ್ದು, ಅದಕ್ಕಾಗಿ ಕಾಮರ್ಸ್ ನ ವಿದ್ಯಾರ್ಥಿಗಳ ಮೂಲಕ ಇ-ಮಾರ್ಕೆಟಿಂಗ್ ಮೂಲಕ ಗೂಗಲ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಹಣತೆ ಉರಿದರೂ ಉತ್ತಮ: 
ವಿದ್ಯಾಸಂಸ್ಥೆಯ ಗೋಶಾಲೆಯ 45 ಗೋವುಗಳ ಸೆಗಣಿಯಿಂದ ಹಣತೆ ತಯಾರಿ ನಡೆಯುತ್ತಿದ್ದು, ಇದರ ಜತೆಗೆ 500ರಷ್ಟು ಮಣ್ಣಿನ ಹಣತೆಯನ್ನೂ ತಯಾರಿಸಲಾಗಿದೆ. ಗೋಮಯ ಹಣತೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಉರಿಸಬೇಕಿದ್ದು, ಸುಮಾರು ಅರ್ಧ/ಮುಕ್ಕಾಲು ಗಂಟೆಗಳ ಕಾಲ ಉರಿಯಲಿದೆ. ಬಳಿಕ ಒಟ್ಟು ಹಣತೆಯೇ ಉರಿದರೂ ಯಾವುದೇ ತೊಂದರೆ ಇರುವುದಿಲ್ಲ ಎಂದು ಸಂಘಟಕರು ಹೇಳುತ್ತಾರೆ.

ದೀಪಾವಳಿವರೆಗೆ ತಯಾರಿಯ ಯೋಚನೆ:
ಪ್ರಧಾನಿಯವರ ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ವಿದ್ಯಾರ್ಥಿಗಳ ಮೂಲಕ ಗೋಮಯ ಹಣತೆಯ ತಯಾರು ಮಾಡಲಾಗುತ್ತಿದ್ದು, ದೇಶೀಯ ಹಸುವಿನ ಸೆಗಣಿಯನ್ನೇ ಬಳಸಿ ಹಣತೆ ತಯಾರಿಸಲಾಗುತ್ತದೆ. ನ.4ಕ್ಕೆ ಈ ಕಾರ್ಯ ಆರಂಭಿಸಲಾಗಿದ್ದು, ದೀಪಾವಳಿ ಪ್ರಾರಂಭದವರೆಗೂ ಮುಂದುವರಿಸುವ ಯೋಚನೆ ಇದೆ. ಒಟ್ಟು 10 ಸಾವಿರ ಹಣತೆಗಳನ್ನು ತಯಾರಿಸುವ ಗುರಿ ಹೊಂದಲಾಗಿದ್ದು, ದಿನಕ್ಕೆ 2 ಬ್ಯಾಚ್‌ಗಳ ಮೂಲಕ ತಯಾರಿ ಕಾರ್ಯ ನಡೆಯುತ್ತಿದೆ ಎಂದು ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ತಿಳಿಸಿದ್ದಾರೆ.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...